ಮಿಸ್ ಮಾಡ್ದೆ ಓದಿ: ಸೆಪ್ಟೆಂಬರ್ 1ರಿಂದ ಇಂಟರ್ನ್ಯಾಷನಲ್ ಫ್ಲೈಟ್, ITR ಮತ್ತು LPG ನಿಯಮಗಳಲ್ಲಿ ಬಿಗ್ ಚೇಂಜ್!



(ನ್ಯೂಸ್ಕಡಬ) newskadaba.com,  ಆ.31: ವ್ಯವಹಾರ ಅಥವಾ ವೃತ್ತಿಪರ ಆದಾಯ ಹೊಂದಿರುವವರು 2026-27ರ ಮೌಲ್ಯಮಾಪನ ವರ್ಷಕ್ಕೆ ತೆರಿಗೆ ರಿಟರ್ನ್ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ.ಸೆಪ್ಟೆಂಬರ್ 1ರಿಂದ ಭಾರತದಿಂದ ಹೊರಡುವ ಅಂತಾರಾಷ್ಟ್ರೀಯ ಪ್ರಯಾಣಿಕರು ವಲಸೆ ಕೌಂಟರ್‌ಗಳಲ್ಲಿ ಬೋರ್ಡಿಂಗ್ ಪಾಸ್‌ಗೆ ಸ್ಟಾಂಪ್ ಹಾಕಿಸುವುದು ಅಗತ್ಯವಿಲ್ಲ. ಮೊಬೈಲ್‌ನಲ್ಲಿರುವ ಎಲೆಕ್ಟ್ರಾನಿಕ್ ಬೋರ್ಡಿಂಗ್ ಪಾಸ್ ತೋರಿಸಬಹುದು.







ಎಲ್​​ಪಿಜಿ ಗ್ರಾಹಕರು ಆಗಸ್ಟ್ 31ರೊಳಗೆ ಇ-ಕೆವೈಸಿ ಪೂರ್ಣಗೊಳಿಸಬೇಕು. ಸಬ್ಸಿಡಿ ಮತ್ತು ನಿರಂತರ ಸೇವೆ ಪಡೆಯಲು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ.₹3 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಬೃಹತ್ ಠೇವಣಿಗಳ ಬಡ್ಡಿದರ ಬಹಿರಂಗಪಡಿಸುವಿಕೆ ಸೇರಿದಂತೆ ಆರ್‌ಬಿಐನ ಪರಿಷ್ಕೃತ ಬ್ಯಾಂಕ್ FD ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.






ಸೆಪ್ಟೆಂಬರ್ 1ರಿಂದ ಎಲ್​​ಪಿಜಿ ಸಿಲಿಂಡರ್, ವಾಯುಯಾನ ಇಂಧನ (ATF) ದರಗಳು ಹಾಗೂ ಬ್ಯಾಂಕಿಂಗ್/ATM ಶುಲ್ಕಗಳಲ್ಲಿ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

error: Content is protected !!
Scroll to Top