ಕಡಬ: ಪಟ್ಟಣ ಪಂಚಾಯತ್ ಅಧ್ಯಕ್ಷರ ಮನೆಯಿಂದಲೇ ಹಣ ಕಳ್ಳತನ- ದೂರು ದಾಖಲು

Theft, crime, Robbery


(ನ್ಯೂಸ್ ಕಡಬ) newskadaba.com ಆ. 28. ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಡಗದ್ದೆಯ ಮನೆಯೊಂದರಿಂದ 84,800 ರೂ. ನಗದು ಕಳ್ಳತನವಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







 

ಈ ಸಂಬಂಧ ಕಡಬ ಗ್ರಾಮ ನಿವಾಸಿ ತಮನ್ನಾ ಜಬೀನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.






 

ದೂರುದಾರರ ಪ್ರಕಾರ, ಪಿರ್ಯಾದುದಾರರು ತಮ್ಮ ಗಂಡ, ಮಕ್ಕಳು ಹಾಗೂ ಕುಟುಂಬ ಸದಸ್ಯರೊಂದಿಗೆ ಅಡ್ಡಗದ್ದೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದು, ತಮ್ಮ ರೂಮ್‌ನಲ್ಲಿದ್ದ ಮರದ ಬಾಕ್ಸ್‌ನಲ್ಲಿ ಹಣವನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಆಗಸ್ಟ್ 18ರಂದು ಕಾರ್ಯಕ್ರಮವೊಂದರ ನಿಮಿತ್ತ ಗಂಡ ಹಾಗೂ ಮಕ್ಕಳೊಂದಿಗೆ ಉಡುಪಿಗೆ ತೆರಳಿದ್ದ ಅವರು, ಅದೇ ದಿನ ಮನೆಗೆ ವಾಪಸ್ ಮರಳಿದ್ದರು. ಬಳಿಕ ಆಗಸ್ಟ್ 24ರಂದು ಮರದ ಬಾಕ್ಸ್‌ನಲ್ಲಿದ್ದ ಹಣವನ್ನು ತೆಗೆಯಲು ಹೋದಾಗ, ಬಾಕ್ಸ್ ಒಡೆದ ಸ್ಥಿತಿಯಲ್ಲಿ ಕಂಡುಬಂದಿದೆ.

 

ಪರಿಶೀಲನೆ ನಡೆಸಿದಾಗ ಬಾಕ್ಸ್‌ನಲ್ಲಿಟ್ಟಿದ್ದ ₹84,800 ನಗದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಅ.ಕ್ರ. 101/2026, ಕಲಂ 305 BNS-2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!
Scroll to Top