(ನ್ಯೂಸ್ ಕಡಬ) newskadaba.com ಆ. 28. ಕಡಬ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮವು ಶುಕ್ರವಾರದಂದು ಜರಗಿತು. ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಶ್ರೀ ಪೂರ್ಣ ಆಯುರ್ವೇದ ಚಿಕಿತ್ಸಾಲಯ ಇದರ ವೈದ್ಯರಾದ ಡಾ| ಸುರೇಶ್ ಕುಮಾರ್ ಕೂಡೂರು ಇವರು ರಕ್ಷೆಯಲ್ಲಿರುವ ಸಾವಿರಾರು ನೂಲು ಸೇರಿ ಒಂದು ಹೂವಿನ ಆಕಾರವನ್ನು ಪಡೆದು ಬಲವಾದಂತೆ ನಾವು ಕೂಡ ಜಾತಿ ಬಣ್ಣ ಯಾವುದೇ ಬೇಧವಿಲ್ಲದೇ ಭಾರತ ಮಾತೆಯನ್ನು ವಿಶ್ವಗುರು ಮಾಡುವಲ್ಲಿ ಒಂದಾಗಬೇಕು ಎಂದು ರಕ್ಷಾಬಂಧನದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿಸಿಕೊಂಡರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಗುರುಗಳಾದ ಮುಖ್ಯ ಶ್ರೀಮಾನ್ ಶ್ರೀ ವಸಂತ ಕೆ. ಇವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅಧ್ವಿತಾ ಎಸ್. ರೈ 8ನೇ ತರಗತಿ ಸ್ವಾಗತಿಸಿ, 9ನೇ ತರಗತಿ ಕೃತಿ ವಂದಿಸಿದರು. ಎನ್.ಸಿ. ಜಶ್ವಿತಾ, 10ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.








