ಜಾನಪದ ತರಬೇತಿ: ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com . 27. ಜಾನಪದ ಕಲಾವಿದರು, ವಿದ್ವಾಂಸರು, ವಾದ್ಯಗಾರರು, ಬುಡಕಟ್ಟು ಜನರನ್ನೊಳಗೊಂಡಂತೆಜಾನಪದ ಸಂಗಮಹೆಸರಿನ ಕಾರ್ಯಕ್ರಮವನ್ನು ಗಿರಿಜನ ಉಪಯೋಜನೆಯಡಿ ಸರ್ಕಾರವು ಹೊಸಯೋಜನೆಯಾಗಿ ಘೋಷಿಸಿದೆ. ಗಿರಿಜನ ಉಪಯೋಜನೆಯಡಿ ರಾಜ್ಯದ 4 ವಿಭಾಗಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಜಾನಪದ ಕಲಾಪ್ರಕಾರದ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
   







ಆಸಕ್ತಿಯುಳ್ಳ 16 ರಿಂದ 40 ರೊಳಗಿನ ವಯೋಮಾನದ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅಕಾಡೆಮಿಯ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು – 560002 ವಿಳಾಸಕ್ಕೆ ಸೆಪ್ಟೆಂಬರ್ 16 ರೊಳಗೆ ಕಳುಹಿಸಬೇಕು. ಅರ್ಜಿ ನಮೂನೆಯನ್ನು ಅಕಾಡೆಮಿ ವೆಬ್ಸೈಟ್ https://janapada.karnataka.gov.in/ ಮೂಲಕ ಪಡೆದುಕೊಳ್ಳಬಹುದು.
     






ಹೆಚ್ಚಿನ ವಿವರಗಳಿಗೆ ಅಕಾಡೆಮಿ ಮೇಲ್ registrar.janapada@gmail.com ಅಥವಾ ದೂರವಾಣಿ ಸಂಖ್ಯೆ 080-22215509 ಸಂಪರ್ಕಿಸಬಹುದು. ಶಿಬಿರಾರ್ಥಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top