(ನ್ಯೂಸ್ ಕಡಬ) newskadaba.com, ಆ.21: ಗುಂಡ್ಯ-ಸುಳ್ಯ ರಾಜ್ಯ ಹೆದ್ದಾರಿಯ ಮಣಿಭಾಂಡ್ ಬಳಿ ಬುಧವಾರ ಮರವೊಂದು ದ್ವಿಚಕ್ರ ವಾಹನದ ಮೇಲೆ ಬಿದ್ದು, ಹಿಂಬದಿ ಸವಾರನೊಬ್ಬ ಗಂಭೀರ ಗಾಯಗೊಂಡಿದ್ದಾನೆ..
ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಪ್ರಯಾಣಿಸುತ್ತಿದ್ದ ಕೊಡೆಂಕಿರಿ ನಿವಾಸಿ ದಿವಾಕರ್ ಕೊಡೆಂಕಿರಿ ಗಂಭೀರವಾಗಿ ಗಾಯಗೊಂಡಿದ್ದು, ವಿನೋದ್ ಹೊಳ್ಳ ಅವರು ವಾಹನ ಚಲಾಯಿಸುತ್ತಿದ್ದರು.ತಕ್ಷಣವೇ ಸ್ಪಂದಿಸಿದ ಸ್ಥಳೀಯರು ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಹೆದ್ದಾರಿ ಉದ್ದಕ್ಕೂ, ವಿಶೇಷವಾಗಿ ಮಣಿಭಾಂಡ್ ಪ್ರದೇಶದಲ್ಲಿ ಅಪಾಯಕಾರಿಯಾಗಿರುವ ಮರಗಳನ್ನು ಗುರುತಿಸಿ ತೆರವುಗೊಳಿಸುವಂತೆ ಸ್ಥಳೀಯರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.








