(ನ್ಯೂಸ್ ಕಡಬ) newskadaba.com, ಆ.20: ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್(CBE) ಹಾಗೂ STEM ರೋಬೋಟಿಕ್ಸ್ ಇದರ ನೇತೃತ್ವದಲ್ಲಿ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ, ಕಡಬದಲ್ಲಿ ಕಂಪ್ಯೂಟರ್ ವಿಭಾಗಕ್ಕೆ ಸಂಬಂಧಿಸಿದಂತೆ ರೋಬೋಟಿಕ್ ಎಂಬ ಹೊಸ ಕಲಿಕಾ ಮಾದರಿಯನ್ನು ಸೇರಿಸಲಾಗಿದೆ. ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಅದರ ವ್ಯಾಪ್ತಿಯನ್ನು ಪರಿಗಣಿಸಿ ಸಲುವಾಗಿ ಹೊಸ ಕಲಿಕಾ ಮಾದರಿಯನ್ನು ರೋಬೋಟಿಕ್ ಮುಖಾಂತರ ನೀಡಲಾಗಿದೆ.
ನವಯುಗದ ತಂತ್ರಜ್ಞಾನವನ್ನು ಮಕ್ಕಳಿಗೆ ಸಲುವಾಗಿ ರೋಬೋಟಿಕ್ಸ್ ಹಾಗೂ ಎಐ ಎಂಬ ನವೀನ ಮಾದರಿಯು ಮಕ್ಕಳಲ್ಲಿ ಹೊಸ ಅವಕಾಶಗಳನ್ನು ತೆರೆದಿರುತ್ತದೆ.ಈ ಹೊಸ ವಿನ್ಯಾಸದ ಕಲಿಕೆಗೆ ಹೊಸ ಅಧ್ಯಾಯವನ್ನು ಆರಂಭಿಸಲು ಶಾಲೆಯ ಪ್ರಾಂಶುಪಾಲರಾದ ವಂದನೀಯ ಸುನಿಲ್ ಪ್ರವೀಣ್ ಪಿಂಟೋ, ಮುಖ್ಯ ಶಿಕ್ಷಕಿ ದಕ್ಷ ಕುಮಾರಿ, ಕಂಪ್ಯೂಟರ್ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಹಾಗೂ ಶ್ರೀಮತಿ ಸಂಗೀತ ಅವರು ಉಪಸ್ಥಿತರಿದ್ದರು.








