(ನ್ಯೂಸ್ ಕಡಬ) newskadaba.com, ಆ.20: ಬೆಂಗಳೂರಿನ ಬಿಡದಿ ಸಮೀಪ ಲೈಸೆನ್ಸ್‌ರಹಿತ ನಕಲಿ ಔಷಧ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಲಾಗಿದೆ
₹5 ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧಗಳು, ಯಂತ್ರಗಳು ಹಾಗೂ Pfizer ಸೇರಿದಂತೆ ಪ್ರಸಿದ್ಧ ಬ್ರ್ಯಾಂಡ್‌ಗಳ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಯ ಜೆನೆರಿಕ್ ಔಷಧಗಳನ್ನು ತಂದು, ಹೊಸ ವಯಲ್‌ಗಳಿಗೆ ತುಂಬಿ ದುಬಾರಿ ಆಮದು ಬ್ರ್ಯಾಂಡ್‌ಗಳ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದರು.
ಕ್ಯಾನ್ಸರ್ ಹಾಗೂ ICUನಲ್ಲಿ ಬಳಸುವ ಅತ್ಯಂತ ಗಂಭೀರ ಚಿಕಿತ್ಸೆಯ ಇಂಜೆಕ್ಷನ್‌ಗಳನ್ನೂ ನಕಲಿ ಮಾಡಿರುವುದು ಪತ್ತೆಯಾಗಿದೆ.








