15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆಪಾಧಿತೆ ಕೊನೆಗೂ ಬಂಧನ: ಬೆರಳಚ್ಚು ಪರೀಕ್ಷೆಯಿಂದ ಬಯಲಾಯ್ತು ನೈಜ ಗುರುತು!



(ನ್ಯೂಸ್‌ ಕಡಬ) newskadaba.com,  ಆ.19: ನ್ಯಾಯಾಲಯದ LPC ವಾರೆಂಟ್‌ನಿಂದ ತಪ್ಪಿಸಿಕೊಂಡು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಆ. 18, 2026ರಂದು ಬಂಧಿಸಿದ್ದಾರೆ.







2011ರಲ್ಲಿ ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ‘ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ’ ಅಡಿಯಲ್ಲಿ ಕೇಸ್ ದಾಖಲಾಗಿತ್ತು (SPLIT CC ನಂ. 02/2014, LPC ನಂ. 10/2019).ಆರೋಪಿತೆಯು ಆರಂಭದಲ್ಲಿ ತನ್ನ ಹೆಸರು ಆಯಿಷಾ (36), ಪತಿ ಹಸನಬ್ಬ, ಗುರುಪುರ ವಿಳಾಸವೆಂದು ಸುಳ್ಳು ಮಾಹಿತಿ ನೀಡಿದ್ದಳು.






ತನಿಖೆಯ ನಂತರ ಈಕೆಯ ನಿಜವಾದ ಹೆಸರು ಸೆಫಿಯಾ (53), ಪತಿ (ದಿ.) ಅಬೂಬುಕ್ಕರ್, ಮಿಜಾರು, ಮೂಡಬಿದರೆ ತಾಲೂಕು ಎಂಬುದು ತಿಳಿದುಬಂದಿದೆ.ಮಂಗಳೂರು ಬೆರಳಚ್ಚು ಘಟಕದ ತಜ್ಞರು 2011ರ ಪ್ರಕರಣದ ಕಡತದಲ್ಲಿದ್ದ ಬೆರಳಚ್ಚನ್ನು ಪರಿಶೀಲಿಸಿ, ಎರಡೂ ಬೆರಳಚ್ಚುಗಳು ಒಂದೇ ಎಂದು ದೃಢಪಡಿಸಿದರು.ಬಂಧಿತ ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!
Scroll to Top