ಮಂಗಳೂರು: ICYM ನಿಂದ ಯುವಜನರಿಗಾಗಿ ‘ಸ್ಕಿಲ್ ಫಿಯೆಸ್ಟಾ 2026’ ಕೌಶಲ್ಯಾಭಿವೃದ್ಧಿ ಮಾಸ್ಟರ್‌ಕ್ಲಾಸ್



(ನ್ಯೂಸ್‌ ಕಡಬ) newskadaba.com,  ಆ.19: ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ (ICYM) ಮಂಗಳೂರು ಧರ್ಮಪ್ರಾಂತ್ಯದ ಸೆಂಟ್ರಲ್ ಕೌನ್ಸಿಲ್ ವತಿಯಿಂದ ಯುವಜನರಿಗಾಗಿ ಸ್ಕಿಲ್ ಫಿಯೆಸ್ಟಾ 2026″ ಎಂಬ ವಿಶೇ‍ಷ ಒಂದು ದಿನದ ಕೌಶಲ್ಯ ಅಭಿವೃದ್ಧಿ ಮಾಸ್ಟರ್‌ಕ್ಲಾಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ







ಇದು ಮಂಗಳೂರು ಧರ್ಮಪ್ರಾಂತ್ಯದ 1st PUC ನಿಂದ 35 ವರ್ಷದವರೆಗಿನ ಕ್ಯಾಥೋಲಿಕ್ ಯುವಜನರು ಮತ್ತು ವಿದ್ಯಾರ್ಥಿಗಳಿಗೆ ಮಾತ್ರ. ಐಸಿವೈಎಂ ಸದಸ್ಯರಾಗಿರಲಿ ಅಥವಾ ಇಲ್ಲದಿರಲಿ, ಎಲ್ಲರೂ ಭಾಗವಹಿಸಬಹುದು. ಈ ಕಾರ್ಯಕ್ರಮವು 2026 ಆಗಸ್ಟ್ 23, ಭಾನುವಾರ ಬೆಳಿಗ್ಗೆ 8:30 ಕ್ಕೆ ಸೇಂಟ್ ಅಲೋಶಿಯಸ್ ಡೀಮ್ಡ್ ಟು ಬಿ ಯೂನಿವರ್ಸಿಟಿ, ಮಂಗಳೂರು ದಲ್ಲಿ ನಡೆಯಲಿದೆ.






” ಸ್ಕಿಲ್‌ ಟುಡೇ , ಲೀಡರ್‌ ಟುಮಾರೋ , Impact Forever” ಎಂಬ ಥೀಮ್‌ನಡಿಯಲ್ಲಿ ಈ ಉಪಕ್ರಮವು ಯುವಜನರಿಗೆ 21ನೇ ಶತಮಾನದ ಅಗತ್ಯ ಕೌಶಲ್ಯಗಳನ್ನು ನೀಡುವ ಗುರಿ ಹೊಂದಿದೆ. ಉದ್ಯಮ ತಜ್ಞರು ನಡೆಸಿಕೊಡುವ ಸೆಷನ್‌ಗಳಲ್ಲಿ ಈ ಕೆಳಗಿನ ವಿಷಯಗಳಿರುತ್ತವೆ: ಎಐ & ಇನೋವೇಶನ್‌ , ಕಂಟೆಂಟ್ ಕ್ರಿಯೇಷನ್, ಸ್ಟಾರ್ಟ್‌ಅಪ್ ಮೈಂಡ್‌ಸೆಟ್, ಸಿವಿಲ್‌ ಸರ್ವಿಸ್ಸ್‌, ‌ಈವೆಂಟ್‌ ಮ್ಯಾನೇಜ್‌ಮೆಂಟ್‌, ಮತ್ತು ಪಬ್ಲಿಕ್‌ ಸ್ಪೀಕಿಂಗ್‌ ಸಾಫ್ಟ್‌ ಸ್ಕಿಲ್ಸ್‌ . ಭಾಗವಹಿಸುವವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಇದು ಅವರ Resume ಮತ್ತು ಭವಿಷ್ಯದ ಅವಕಾಶಗಳಿಗೆ ಮೌಲ್ಯವನ್ನು ಸೇರಿಸುತ್ತದೆ. ಮುಂಗಡ ನೋಂದಣಿ ಕಡ್ಡಾಯ. ಆಸಕ್ತ ಅಭ್ಯರ್ಥಿಗಳು +91 9448917044 ಗೆ ಸಂಪರ್ಕಿಸುವ ಮೂಲಕ ಅಥವಾ ತಮ್ಮ ICYM ಘಟಕದ ಮೂಲಕ ನೋಂದಾಯಿಸಿಕೊಳ್ಳಬಹುದು. ಸೀಟುಗಳು ಸೀಮಿತ. ಸೀಟುಗಳು ಭರ್ತಿಯಾದ ನಂತರ ನೋಂದಣಿ ಮುಚ್ಚಲಾಗುವುದು.

error: Content is protected !!
Scroll to Top