(ನ್ಯೂಸ್ ಕಡಬ) newskadaba.com, ಆ.15 : ಬಂಟ್ವಾಳದ ಬುಡೋಳಿ ಮಡಲ ನಿವಾಸಿ ರಝಾಕ್ ಅವರ ಪುತ್ರ ಮೊಹಮ್ಮದ್ ಅಫೀಲ್ ಎಂಬ ಯುವಕ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಪರೂಪದ ತಾಂತ್ರಿಕ ಮಾದರಿಯೊಂದನ್ನು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.
ಎಸ್.ಎಸ್.ಎಲ್.ಸಿ ನಂತರ ಆಟೋಮೊಬೈಲ್ ಕೋರ್ಸ್ ಮಾಡಿರುವ ಅಫೀಲ್, ಮೋಟಾರ್, ಬ್ಯಾಟರಿ, ರೆಗ್ಯುಲೇಟರ್, ಫೋಮ್, ಪ್ಲಗ್ ಹಾಗೂ ರಾಷ್ಟ್ರಧ್ವಜವನ್ನು ಬಳಸಿ ಈ ವಿಶಿಷ್ಟ ಮಾದರಿಯನ್ನು ರೂಪಿಸಿದ್ದಾರೆ.ಪ್ರಸ್ತುತ ಪುತ್ತೂರಿನ ಖಾಸಗಿ ಪ್ಲಾಸ್ಟಿಕ್ ಕಂಪನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಇವರು, ಬಿಡುವಿನ ವೇಳೆಯಲ್ಲಿ ತಮ್ಮ ಸೃಜನಶೀಲ ಪ್ರಯೋಗಗಳನ್ನು ಮುಂದುವರಿಸುತ್ತಿದ್ದಾರೆ.
ಇಂದಿನ AI ಹಾಗೂ ತಂತ್ರಜ್ಞಾನದ ಯುಗದಲ್ಲಿ ಯುವಜನತೆ ತಂತ್ರಜ್ಞಾನ ಬಳಕೆಯಷ್ಟೇ ಅಲ್ಲದೆ, ಹೊಸ ಆವಿಷ್ಕಾರಗಳತ್ತ ಗಮನಹರಿಸಬೇಕು ಎಂಬುದಕ್ಕೆ ಅಫೀಲ್ ಅವರ ಈ ಪ್ರಯತ್ನ ಮಾದರಿಯಾಗಿದೆ.





