ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ: ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com ಮಂಗಳೂರು, ಜು. 31. ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ 2026-27ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿವೇತನ ಸೌಲಭ್ಯವನ್ನು ಪಡೆಯಲು ವೆಬ್‍ಸೈಟ್ https://ssp.postmatric.karnataka.gov.in/ ಮೂಲಕ ಆನ್‍ ಲೈನ್‍ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಹತೆಗಳು: ಮಾನ್ಯತೆ ಪಡೆದ ಮೆಟ್ರಿಕ್ ನಂತರದ ಕೋರ್ಸ್‍ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯ ಪೋಷಕರ ಕುಟುಂಬದ ಆದಾಯ ಮಿತಿ ವಾರ್ಷಿಕ ರೂ.2.50 ಲಕ್ಷಗಳ ಮಿತಿಯೊಳಗೆ ಇರಬೇಕು. ವಿದ್ಯಾರ್ಥಿಯು ಮುಂದಿನ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಹೊಂದಿರಬೇಕು.







ಅರ್ಜಿ ಸಲ್ಲಿಸಬೇಕಾದ ವಿಧಾನಗಳು ಮತ್ತು ಸಲ್ಲಿಸಬೇಕಾಗಿರುವ ದಾಖಲೆಗಳು: ನವೀಕರಣ ವಿದ್ಯಾರ್ಥಿಗಳು ಸಹ 2026-27ನೇ ಸಾಲಿಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಬೇಕು. ವಿದ್ಯಾರ್ಥಿಯ ಆಧಾರ್ ವಿವರಗಳು ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಎಸ್.ಎಸ್.ಪಿ ಖಾತೆಯನ್ನು ರಚಿಸಬೇಕು. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಕುಟುಂಬ ತಂತ್ರಾಂಶದಲ್ಲಿ ನೋಂದಣಿಯಾಗಿ ಕುಟುಂಬ ಸಂಖ್ಯೆಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ. ಕಾಲೇಜು ಮತ್ತು ಕೋರ್ಸ್‍ನ ವಿವರವನ್ನು ಆಯ್ಕೆ ಮಾಡಬೇಕು. ಪೋಷಕರ/ಪಾಲಕರ ಆಧಾರ್ ವಿವರವನ್ನು ನಮೂದಿಸಬೇಕು. ವಿದ್ಯಾರ್ಥಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ (NPCI






Mapping) ಆಧಾರ್ ಜೋಡಣೆಯಾಗಿರಬೇಕು. ವಿದ್ಯಾರ್ಥಿಯ ಹೆಸರಿನಲ್ಲಿ ನೀಡಲಾದ ಗಣಕೀಕೃತ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಆರ್.ಡಿ ಸಂಖ್ಯೆಗಳು, ಇ-ದೃಡೀಕರಿಸಲಾದ ದಾಖಲೆಗಳ ಸಂಖ್ಯೆಯನ್ನು ನಮೂದಿಸಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಎನ್.ಎಸ್.ಪಿ ಒ.ಟಿ.ಆರ್ ಸೃಜಿಸಿರಬೇಕು.

 

ಹೆಚ್ಚಿನ ಮಾಹಿತಿಗೆ ಸಹಾಯವಾಣಿ 080-22261789 ಹಾಗೂ 080-44554455 ಅಥವಾ ಸ್ಥಳೀಯ ತಾಲೂಕು ಸಮಾಜ ಕಲ್ಯಾಣ ಇಲಾಖೆ  (ಮಂಗಳೂರು:9480843114, ಬಂಟ್ವಾಳ: 9480843112, ಪುತ್ತೂರು: 9480843115, ಬೆಳ್ತಂಗಡಿ: 9480843113, ಸುಳ್ಯ: 9480843116) ಯನ್ನು ಸಂಪರ್ಕಿಸಬಹುದು ಎಂದು ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top