ರೈಲ್ವೆ ಗ್ರೂಪ್ ಡಿ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: CBT ಪರೀಕ್ಷಾ ವೇಳಾಪಟ್ಟಿ ಪರಿಷ್ಕರಣೆ, ಆ.25 ರವರೆಗೆ ಪರೀಕ್ಷೆ ವಿಸ್ತರಣೆ



(ನ್ಯೂಸ್‌ ಕಡಬ) newskadaba.com,  ಜು.31 : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಬೃಹತ್ ಪ್ರಮಾಣದ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಮಂಡಳಿಯು (RRB) ನಡೆಸಲಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ.ಈ ಬೃಹತ್ ನೇಮಕಾತಿ ಅಭಿಯಾನದ ಮೂಲಕ ರೈಲ್ವೆ ಮಂಡಳಿಯು ಒಟ್ಟು 22,195 ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ.







ಮೂಲ ಯೋಜನೆಯ ಪ್ರಕಾರ ಈ ಪರೀಕ್ಷೆಯು ಆಗಸ್ಟ್ 3 ರಿಂದ ಆಗಸ್ಟ್ 21 ರವರೆಗೆ ನಡೆಯಬೇಕಿತ್ತು. ಆದರೆ, ಅಭ್ಯರ್ಥಿಗಳ ಸಂಖ್ಯೆ ಹಾಗೂ ಸಿದ್ಧತೆಗಳನ್ನು ಪರಿಗಣಿಸಿ ಈಗ ಪರೀಕ್ಷಾ ದಿನಾಂಕಗಳನ್ನು ಆಗಸ್ಟ್ 25 ರವರೆಗೆ ವಿಸ್ತರಿಸಲಾಗಿದೆ.ಹೊಸ ವೇಳಾಪಟ್ಟಿಯಂತೆ ಸಂಪೂರ್ಣ ಪರೀಕ್ಷೆಯು ಒಟ್ಟು 16 ದಿನಗಳಲ್ಲಿ, 4 ಪ್ರಮುಖ ಹಂತಗಳಲ್ಲಿ ನೆರವೇರಲಿದೆ:ಮೊದಲ ಹಂತ: ಆಗಸ್ಟ್ 3 ರಿಂದ ಆಗಸ್ಟ್ 6 , ಎರಡನೇ ಹಂತ: ಆಗಸ್ಟ್ 9 ರಿಂದ ಆಗಸ್ಟ್ 14, ಮೂರನೇ ಹಂತ: ಆಗಸ್ಟ್ 17 ರಿಂದ ಆಗಸ್ಟ್ 21, ಅಂತಿಮ ಹಂತ: ಆಗಸ್ಟ್ 25






ಅಭ್ಯರ್ಥಿಗಳು ತಮ್ಮ ಪರೀಕ್ಷಾ ನಗರ ಮತ್ತು ದಿನಾಂಕವನ್ನು ತಿಳಿದುಕೊಳ್ಳಲು ಪರೀಕ್ಷಾ ದಿನಾಂಕದ 10 ದಿನಗಳ ಮೊದಲು ಸಂಬಂಧಪಟ್ಟ RRB ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಿಂಕ್ ನೀಡಲಾಗುತ್ತದೆ.

ಪರೀಕ್ಷೆಗೆ ಹಾಜರಾಗಲು ಅಗತ್ಯವಿರುವ ಹಾಲ್ ಟಿಕೆಟ್‌ಗಳನ್ನು ಪರೀಕ್ಷಾ ದಿನಾಂಕಕ್ಕೆ ಸರಿಯಾಗಿ 4 ದಿನಗಳ ಮುಂಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ 30 ಪ್ರಶ್ನೆಗಳು (30 ಅಂಕಗಳು),, ಗಣಿತ 25 ಪ್ರಶ್ನೆಗಳು (25 ಅಂಕಗಳು), ಸಾಮಾನ್ಯ ವಿಜ್ಞಾನ 25 ಪ್ರಶ್ನೆಗಳು (25 ಅಂಕಗಳು),ಸಾಮಾನ್ಯ ಅರಿವು ಮತ್ತು ಪ್ರಚಲಿತ ವಿದ್ಯಮಾನಗಳು 20 ಪ್ರಶ್ನೆಗಳು (20 ಅಂಕಗಳು)ಈ ಪರೀಕ್ಷೆಯಲ್ಲಿ ಪ್ರತಿಯೊಂದು ಅಂಕವೂ ಅತ್ಯಂತ ನಿರ್ಣಾಯಕವಾಗಿದೆ. ಅಭ್ಯರ್ಥಿಗಳು ಉತ್ತರ ನೀಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ.ಪ್ರತಿ ತಪ್ಪು ಉತ್ತರಕ್ಕೂ ಮೂರನೇ ಒಂದು ಭಾಗದಷ್ಟು (1/3) ಋಣಾತ್ಮಕ ಅಂಕಗಳನ್ನು ಕಳೆಯಲಾಗುತ್ತದೆ.

error: Content is protected !!
Scroll to Top