ಎಸ್.ಸಿ ಅಭ್ಯರ್ಥಿಗಳಿಗೆ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ: ಅರ್ಜಿ ಆಹ್ವಾನ



(ನ್ಯೂಸ್ ಕಡಬ) newskadaba.com ಮಂಗಳೂರು, ಜು. 30. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಸಿಡಾಕ್, ಮಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಗೂ ಜಿಲ್ಲಾ ಕೌಶಲ್ಯ ಮಿಶನ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಂತ ಉದ್ಯೋಗವನ್ನು ಸ್ಥಾಪಿಸಲು ಇಚ್ಚಿಸುವ ಪರಿಶಿಷ್ಟ ಜಾತಿಯ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗಾಗಿ  ಹತ್ತು ದಿನಗಳ ಉದ್ಯವiಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು  ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಮಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.







 

ಕಾರ್ಯಕ್ರಮದಲ್ಲಿ ಉದ್ಯಮಶೀಲರ ಗುಣಲಕ್ಷಣಗಳು/ ಸಾಮರ್ಥ್ಯಗಳು, ಉದ್ಯಮಶೀಲತೆಯ ಅಭಿವೃದ್ಧಿಗೆ ಅವಶ್ಯವಿರುವ  ಸಾಧನಾ ಪ್ರೇರಣಾ ತರಬೇತಿ, ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಹಂತಗಳು, ಉದ್ಯಮ ಅವಕಾಶಗಳನ್ನು ಗುರುತಿಸುವುದು, ಉದ್ಯಮ ಆಯ್ಕೆಯ ವಿಧಾನ, ಹಣಕಾಸು ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಸಣ್ಣ ಉದ್ಯಮ ನಿರ್ವಹಣೆ, ಸರ್ಕಾರದ ಸ್ವಯಂ ಉದ್ಯಮ ಯೋಜನೆಗಳು, ಯೋಜನಾ ವರದಿ ತಯಾರಿಕೆ ಬ್ಯಾಂಕ್‍ಗಳ ಪಾತ್ರ ಇತ್ಯಾದಿ ವಿಷಯಗಳ ಬಗ್ಗೆ ಪರಿಣಿತ ಅತಿಥಿ ಬೋಧಕರಿಂದ ಉಪನ್ಯಾಸಗಳನ್ನು ಏರ್ಪಡಿಸಿ ಯಶಸ್ವಿ ಉದ್ಯಮಶೀಲರೊಂದಿಗೆ ಚರ್ಚಿಸುವ ಅವಕಾಶ ನೀಡಲಾಗುತ್ತದೆ.






 

ತರಬೇತಿ ಮುಗಿದ ನಂತರ ಉದ್ಯಮ ಪ್ರಾರಂಭಿಸಲು ಬೆಂಬಲಸೇವೆ ಒದಗಿಸಲಾಗುತ್ತದೆ. ಕಾರ್ಯಕ್ರಮದಲ್ಲಿ 18 ರಿಂದ 45 ವರ್ಷ ವಯೋಮಿತಿಯ, 10ನೇ ತರಗತಿ ಪಾಸಾದ ಪರಿಶಿಷ್ಟ ಜಾತಿಯ ಪುರುಷ ಹಾಗೂ ಮಹಿಳಾ ಸ್ವ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಬಹುದು. ಈ ಕಾರ್ಯಕ್ರಮದ ಸದುಪಯೋಗವನ್ನು  ದಕ್ಷಿಣ ಕನ್ನಡ ಜಿಲ್ಲೆಯ ಸ್ವ ಉದ್ಯೋಗ ಆಕಾಂಕ್ಷಿಗಳು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ನಗರದ ಉರ್ವ ಮಾರ್ಕೆಟ್ ಕಟ್ಟಡದ  2 ನೇ ಮಹಡಿಯಲ್ಲಿರುವ
ಸಿಡಾಕ್ ಉಪ ನಿರ್ದೇಶಕರ ಕಛೇರಿ (ದೂರವಾಣಿ ಸಂಖ್ಯೆ:9448812974, 9886035251, 8546894517) ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯ ಜೊತೆಗೆ 4 ಪಾಸ್ ಪೋರ್ಟ್ ಅಳತೆಯ ಫೋಟೋ , ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್‍ನ ಪ್ರತಿಯನ್ನು ಈ ಕಛೇರಿಗೆ ಸಲ್ಲಿಸಬೇಕು ಎಂದು  ಸಿಡಾಕ್ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top