ಉದ್ಯೋಗವಕಾಶ: ಆಗಸ್ಟ್ 1 ರಂದು ಸಂದರ್ಶನ



(ನ್ಯೂಸ್ ಕಡಬ) newskadaba.com ಜು. 30. ಅಪೊಲೊ ಫಾರ್ಮಸಿ ಕಂಪೆನಿಯ ವತಿಯಿಂದ ಪುತ್ತೂರು, ಕುಂಬ್ರ, ಸುಳ್ಯ, ಬಿ.ಸಿ.ರೋಡ್, ವಿಟ್ಲ ಹಾಗೂ ಮಂಗಳೂರಿನಲ್ಲಿ ಖಾಲಿ ಇರುವ ಫಾರ್ಮಾಸಿಸ್ಟ್, ಫಾರ್ಮಾಸಿ ಎಡ್, ಸಿ.ಎಸ್.ಎ, ಅಪ್ರೆಂಟಿಸ್ ಹುದ್ದೆಗೆ ನೇರ ಸಂದರ್ಶನವನ್ನು ಆಗಸ್ಟ್ 1 ರಂದು ಬೆಳಗ್ಗೆ 10:30ರಿಂದ ಸಂಜೆ 5 ಗಂಟೆಯವರೆಗೆ  ಪುತ್ತೂರು ಮಿನಾರ್ ಕಾಂಪ್ಲೆಕ್ಸ್ ನೆಲಮಹಡಿಯಲ್ಲಿರುವ ಶಾಪ್ ನಂ: 06 & 07 ರಲ್ಲಿ ಆಯೋಜಿಸಲಾಗಿದೆ.
ನೇರ ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ ಅಥವಾ ಡಿ.ಫಾರ್ಮಾ, ಬಿ.ಫಾರ್ಮಾ ಹೊಂದಿರುವ ಪುರುಷ ಅಭ್ಯರ್ಥಿಗಳು ಮಾತ್ರ ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಕಂಪನಿ ವತಿಯಿಂದ ಪಿ.ಎಫ್, ಇ.ಎಸ್.ಐ, ಬೋನಸ್, ಗ್ರಾಚುಟಿ, ಆಕರ್ಷಕ ಸೇಲ್ಸ್ ಇನ್ಸೆಂಟಿವ್, ವಾರ್ಷಿಕ ವೃದ್ದಿ, ಉತ್ತಮ ಉದ್ಯೋಗ ಅವಕಾಶ ಇರುತ್ತದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







error: Content is protected !!
Scroll to Top