ಬ್ಯಾಂಕ್ ಆಫ್ ಬರೋಡಾ ಗ್ರಾಹಕರ ಗಮನಕ್ಕೆ: ನೆಟ್ ಬ್ಯಾಂಕಿಂಗ್, ‘bob World’ ಆಪ್ PIN ತಕ್ಷಣವೇ ಬದಲಾಯಿಸಿ!



(ನ್ಯೂಸ್‌ ಕಡಬ) newskadaba.com,  ಜು.28 : ಭಾರತದ 3ನೇ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆದ ‘ಬ್ಯಾಂಕ್ ಆಫ್ ಬರೋಡಾ’ದ 1,000 GB (1 TB) ಸೂಕ್ಷ್ಮ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ.ಟ್ರಿಪಲ್ ಎಕ್ಸ್’ ಎಂಬ ಹ್ಯಾಕರ್ಸ್ ಗುಂಪು ಬ್ಯಾಂಕಿನ ಇಮೇಲ್ ವ್ಯವಸ್ಥೆಯಲ್ಲಿದ್ದ ಲೋಪವನ್ನು ಬಳಸಿಕೊಂಡು ಈ ದಾಳಿ ನಡೆಸಿದೆ.







ಏನೆಲ್ಲಾ ಸೋರಿಕೆಯಾಗಿದೆ ಎನ್ನುವುದಾದರೆ ಗ್ರಾಹಕರ ಖಾಸಗಿ ವಿವರ 1 ರಿಂದ 3 ಲಕ್ಷ ಗ್ರಾಹಕರ ಅಪ್ಲಿಕೇಶನ್ ಫಾರ್ಮ್‌ಗಳು, ಫೋಟೋಗಳು, ಹೆಸರು, ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ವಿವರಗಳು. ಸೇವಿಂಗ್ಸ್ & ಕರೆಂಟ್ ಖಾತೆಗಳ ಬ್ಯಾಲೆನ್ಸ್, ನೆಟ್ ಬ್ಯಾಂಕಿಂಗ್ ಯೂಸರ್ ಐಡಿಗಳು, ಲೋನ್‌ಗಾಗಿ ಸಲ್ಲಿಸಿದ ಆಸ್ತಿ ಪತ್ರಗಳು ಮತ್ತು ಸಾಲ ಮೌಲ್ಯಮಾಪನ ವರದಿಗಳು, ಆಂತರಿಕ ಇಮೇಲ್‌ಗಳು, ವಿಜಿಲೆನ್ಸ್ ತನಿಖಾ ವರದಿಗಳು ಹಾಗೂ ‘bob World’ ಮೊಬೈಲ್ ಆಪ್‌ನ ಆಡಿಟ್ ರಿಪೋರ್ಟ್!…..






ಗ್ರಾಹಕರಿಗೆ ತಕ್ಷಣದ ಮುನ್ನೆಚ್ಚರಿಕೆ:  ನಿಮ್ಮ ನೆಟ್ ಬ್ಯಾಂಕಿಂಗ್ ಮತ್ತು ‘bob World’ ಆಪ್‌ನ ಪಾಸ್‌ವರ್ಡ್ ಹಾಗೂ PIN ತಕ್ಷಣವೇ ಬದಲಾಯಿಸಿ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಅನುಮಾನಾಸ್ಪದ ಕರೆಗಳಿಗೆ ಸ್ಪಂದಿಸಬೇಡಿ.ಬ್ಯಾಂಕ್ ಅಧಿಕಾರಿಗಳು ಎಂದಿಗೂ ನಿಮ್ಮ OTP ಅಥವಾ ಪಾಸ್‌ವರ್ಡ್ ಕೇಳುವುದಿಲ್ಲ.

error: Content is protected !!
Scroll to Top