ನಕಲಿ PhD ಪ್ರಮಾಣಪತ್ರ ನೀಡಿ ಉದ್ಯೋಗ: 249 ಅತಿಥಿ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್



(ನ್ಯೂಸ್‌ ಕಡಬ) newskadaba.com,  ಜು.24:  ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಕಲಿ PhD ಪ್ರಮಾಣಪತ್ರ ನೀಡಿ ಉದ್ಯೋಗ ಪಡೆದಿದ್ದ 249 ಅತಿಥಿ ಉಪನ್ಯಾಸಕರ ವಂಚನೆ ಬೆಳಕಿಗೆ ಬಂದಿದೆ.ಸಂಬಂಧಿತ ಉಪನ್ಯಾಸಕರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆಗೊಳಿಸಿ, ಭವಿಷ್ಯದ ನೇಮಕಾತಿಗಳಿಂದ ಕಪ್ಪುಪಟ್ಟಿಗೆ ಸೇರಿಸಲು ಆದೇಶಿಸಲಾಗಿದೆ.







ಇಲಾಖೆಯ ಆಯುಕ್ತರು ಎಲ್ಲಾ 249 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, 1 ವಾರದೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.ಒಟ್ಟು 249 ಪ್ರಕರಣಗಳಲ್ಲಿ 148 ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲೇ ವರದಿಯಾಗಿವೆ. ಕಲಬುರಗಿ – 33,ಯಾದಗಿರಿ – 31, ಬೀದರ್ – 28, ರಾಯಚೂರು – 24






8 ಅಭ್ಯರ್ಥಿಗಳ ಪ್ರಮಾಣಪತ್ರಗಳು ನೈಜವಾಗಿವೆ ಎಂದು ಪ್ರಾಂಶುಪಾಲರು ನೀಡಿದ ವರದಿ ಹಿನ್ನೆಲೆಯಲ್ಲಿ, ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಲು ಸೂಚಿಸಲಾಗಿದೆ.

error: Content is protected !!
Scroll to Top