ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ: ‘ಡಿಜಿಟಲ್ ಸಾಕ್ಷರತೆ’ಯ ಮಹತ್ವ ಸಾರುವ ತುಳು ಚಿತ್ರ ‘ಇಂಬು’ಗೆ ಸಂದ ಗೌರವ



(ನ್ಯೂಸ್‌ ಕಡಬ) newskadaba.com,  ಜು.20 : ಪ್ರಶಸ್ತಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ,ವಿಜೇತ ಚಿತ್ರ: ಇಂಬು (ಅತ್ಯುತ್ತಮ ತುಳು ಚಲನಚಿತ್ರ),ನಿರ್ದೇಶನ: ಶಿವಧ್ವಜ್ ಶೆಟ್ಟಿ | ನಿರ್ಮಾಣ: ಪ್ರಶಾಂತ್ ರೈ







ಗ್ರಾಮೀಣ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ನಡುವಿನ ಸಂಘರ್ಷವನ್ನು ಹೊಂದಿರುವ ಈ ಚಿತ್ರವು, ಇಂದಿನ ಡಿಜಿಟಲ್ ಯುಗದಲ್ಲಿ ‘ಡಿಜಿಟಲ್ ಸಾಕ್ಷರತೆ’ಯ ಮಹತ್ವವನ್ನು ಸಾರುತ್ತದೆ.






ಹಿರಿಯ ನಟ ನವೀನ್ ಡಿ. ಪಡೀಲ್ ಅವರು ಗ್ರಾಮೀಣ ಅರ್ಚಕ ‘ಬಾಲಣ್ಣ’ ಎಂಬ ಪ್ರಮುಖ ಪಾತ್ರದಲ್ಲಿದ್ದಾರೆ. ಮೊಬೈಲ್ ಫೋನ್ ಖರೀದಿಸಿದ ಬಳಿಕ ಸೈಬರ್ ವಂಚನೆಗೆ ಒಳಗಾಗಿ, ಕಳೆದುಕೊಂಡ ಗೌರವ ಹಾಗೂ ಹಣವನ್ನು ಮರಳಿ ಗಳಿಸುವ ಅವರ ಹೃದಯಸ್ಪರ್ಶಿ ಪಯಣವೇ ಚಿತ್ರದ ಕಥೆ.ಚಂದ್ರಕಲಾ ಉಡುಪಿ, ಹರೀಶ್ ವಾಸು ಶೆಟ್ಟಿ, ಕಾಸರಗೋಡು ಚಿನ್ನ, ಪ್ರಶಂಸಾ ಶೆಟ್ಟಿ, ಪುಷ್ಪರಾಜ್ ಬೊಳಾರ್ ಒಳಗೊಂಡ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗುವ ಮುನ್ನ, ಈ ಚಿತ್ರವು ಗೋವಾದಲ್ಲಿ ನಡೆದ 56ನೇ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ (IFFI) ಪ್ರತಿಷ್ಠಿತ ‘ಇಂಡಿಯನ್ ಪನೋರಮಾ’ ವಿಭಾಗಕ್ಕೂ ಅಧಿಕೃತವಾಗಿ ಆಯ್ಕೆಯಾಗಿತ್ತು.

error: Content is protected !!
Scroll to Top