(ನ್ಯೂಸ್ ಕಡಬ) newskadaba.com ಮಂಗಳೂರು, ಜು. 17. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR)ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 15 ರ ವರೆಗೆ 17,91,980 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 5,41,529 ಫಾರ್ಮ್‍ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ:
ಬೆಳ್ತಂಗಡಿ-66685, ಮೂಡಬಿದ್ರೆ-59167, ಮಂಗಳೂರು ನಗರ ಉತ್ತರ-58682, ಮಂಗಳೂರು ನಗರ ದಕ್ಷಿಣ-67721, ಮಂಗಳೂರು-86607, ಬಂಟ್ವಾಳ-63770, ಪುತ್ತೂರು-59684, ಸುಳ್ಯ-79213.









