ಹೊಳೆಯಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಸೇರಿ ಇಬ್ಬರು ಸಹೋದರರ ದುರ್ಮರಣ



(ನ್ಯೂಸ್‌ ಕಡಬ) newskadaba.com,   ಜು.14: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಉಂಚಳ್ಳಿ ಬಳಿಯ ಮಾಸ್ತಿಜಡ್ಡಿ ಗ್ರಾಮದ ಹೊಳೆಯ ಚೆಕ್ ಡ್ಯಾಮ್‌ನಲ್ಲಿ ಈಜಲು ಹೋದ ಇಬ್ಬರು ಸಹೋದರರು ಆಕಸ್ಮಿಕವಾಗಿ 15 ಅಡಿ ಆಳದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.







.ಹರ್ಷ ಬ್ರಹ್ಮಾವರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಸಿಎ (BCA) ವಿದ್ಯಾರ್ಥಿಯಾಗಿದ್ದನು.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶ್ರೀ ಮಾರಿಕಾಂಬಾ ರಕ್ಷಣಾ ತಂಡದ ಗೋಪಾಲಗೌಡ ನೇತೃತ್ವದ ಸಿಬ್ಬಂದಿ, ಮೃತದೇಹಗಳನ್ನು ಹೊರತೆಗೆದಿದ್ದಾರೆ.






ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತಪ್ಪ ಕುಂಬಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಿರಸಿಗೆ ರವಾನಿಸಲಾಗಿದೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ಮೃತ ವಿದ್ಯಾರ್ಥಿ  ಹಾಗೂ ಆತನ ಸಹೋದರನ ಅಕಾಲಿಕ ನಿಧನಕ್ಕೆ ಬ್ರಹ್ಮಾವರದ ಕಾಲೇಜು ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

error: Content is protected !!
Scroll to Top