ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಭೇಟಿ

(ನ್ಯೂಸ್‌ ಕಡಬ) newskadaba.com,  ಜು.13  : ರಾಜ್ಯ ಸರ್ಕಾರದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಇಂದು ಸೋಮವಾರ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇವಸ್ಥಾನದ ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಅವರು ಮಾಜಿ ಸಚಿವರನ್ನು ಬರಮಾಡಿಕೊಂಡರು. ಭೇಟಿಯ ವೇಳೆ ಎಚ್.ಡಿ. ರೇವಣ್ಣ ಅವರು ಸ್ವಾಮಿಯ ಪಂಚಾಮೃತ ಮಹಾಭಿಷೇಕ ಸೇವೆಯಲ್ಲಿ ಪಾಲ್ಗೊಂಡು, ಮಹಾಮಂಗಳಾರತಿ ವೀಕ್ಷಿಸಿದರು. ತದನಂತರ ತೀರ್ಥ ಪ್ರಸಾದ ಹಾಗೂ ಭೋಜನ ಪ್ರಸಾದವನ್ನು ಸ್ವೀಕರಿಸಿದರು.

Scroll to Top