ನೆಲ್ಯಾಡಿ: ಸಿಡಿಲು ಬಡಿದು ಓರ್ವ ಮೃತ್ಯು ► ತಾಯಿ-ಮಗು ಅಪಾಯದಿಂದ ಪಾರು



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.29. ಸಿಡಿಲಿನ ಆರ್ಭಟಕ್ಕೆ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನೆಲ್ಯಾಡಿಯಲ್ಲಿ ಸೋಮವಾರದಂದು ನಡೆದಿದೆ.







ಮೃತ ವ್ಯಕ್ತಿಯನ್ನು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಳೀಕರೆ ನಿವಾಸಿ ಪ್ರವೀಣ್ ಡಿಸೋಜಾ ಎಂದು‌ ಗುರುತಿಸಲಾಗಿದೆ. ಮೇಸ್ತ್ರಿ ವೃತ್ತಿಯನ್ನು ನಿರ್ವಹಿಸುತ್ತಿದ್ದ ಪ್ರವೀಣ್ ತನ್ನ ಮನೆಯ ಹಾಲ್ ನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದಾಗ ಸಿಡಿಲು ಬಡಿದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಅವರ ಪತ್ನಿ ಲಲಿತಾ ಡಿಸೋಜ ಹಾಗೂ ಪುತ್ರಿ ಪ್ರಣೀತಾ ಪ್ರಿಯಾ ಡಿಸೋಜ ಅಪಾಯದಿಂದ ಪಾರಾಗಿದ್ದಾರೆ.






error: Content is protected !!
Scroll to Top