ಜುಲೈ 17 ರಂದು ನವೀಕೃತ ಬಂಟ್ವಾಳ ರೈಲು ನಿಲ್ದಾಣ ಲೋಕಾರ್ಪಣೆ: ಪ್ರಧಾನಿ ಮೋದಿಯಿಂದ ವರ್ಚುವಲ್ ಉದ್ಘಾಟನೆ



(ನ್ಯೂಸ್‌ ಕಡಬ) newskadaba.com,  ಜು.13 :ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ಯ ಎರಡನೇ ಹಂತದ ಅಡಿಯಲ್ಲಿ ಸುಮಾರು 26.18 ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡಿರುವ ಬಂಟ್ವಾಳ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 17 ರಂದು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. 2024 ರಲ್ಲಿ ಈ ಯೋಜನೆಗೆ ಪ್ರಧಾನಿಯವರೇ ಶಂಕುಸ್ಥಾಪನೆ ನೆರವೇರಿಸಿದ್ದರು.







ನೈಋತ್ಯ ರೈಲ್ವೆ ವಲಯದಲ್ಲಿ ಆಧುನೀಕರಣಗೊಂಡಿರುವ ನಾಲ್ಕು ಪ್ರಮುಖ ನಿಲ್ದಾಣಗಳಲ್ಲಿ ಬಂಟ್ವಾಳವೂ ಒಂದಾಗಿದೆ.ನವೀಕೃತ ಕಾಯುವಿಕೆ ಕೊಠಡಿ, ಆಧುನಿಕ ಟಿಕೆಟ್ ಕೌಂಟರ್‌ಗಳು, ಸುಧಾರಿತ ಆಸನಗಳು, ಇನ್ಫಾರ್ಮೇಶನ್ ಬೋರ್ಡ್ ಹಾಗೂ ಪಬ್ಲಿಕ್ ಅಡ್ರೆಸ್ ಸಿಸ್ಟಮ್‌ಗಳನ್ನು ಅಳವಡಿಸಲಾಗಿದೆ.






ಪ್ರತ್ಯೇಕ ವಾಹನ ನಿಲುಗಡೆ ಹಾಗೂ ಪಿಕಪ್-ಡ್ರಾಪ್ ವಲಯಗಳು, ಸುಂದರವಾದ ಪ್ರವೇಶ-ನಿರ್ಗಮನ ದ್ವಾರಗಳು, ಎಲ್‌ಇಡಿ ದೀಪಗಳು ಮತ್ತು ಫ್ಲಾಟ್‌ಫಾರ್ಮ್ ಶೆಲ್ಟರ್‌ಗಳ ಮೂಲಕ ನಿಲ್ದಾಣಕ್ಕೆ ಹೈಟೆಕ್ ರೂಪ ನೀಡಲಾಗಿದೆ.ಅಮೃತ್ ಭಾರತ್ ಯೋಜನೆಯಡಿ ದೇಶಾದ್ಯಂತ ಅಭಿವೃದ್ಧಿಪಡಿಸಲಾದ ಒಟ್ಟು 75 ರೈಲು ನಿಲ್ದಾಣಗಳನ್ನು ಪ್ರಧಾನಿಯವರು ಇದೇ ದಿನ ದೇಶಕ್ಕೆ ಸಮರ್ಪಿಸಲಿದ್ದಾರೆ.

error: Content is protected !!
Scroll to Top