ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡದ 50% ರಿಯಾಯಿತಿ ಯೋಜನೆಯಡಿ ₹92.43 ಲಕ್ಷ ಸಂಗ್ರಹ



(ನ್ಯೂಸ್‌ ಕಡಬ) newskadaba.com,  ಜು.13 : ರಾಜ್ಯ ಸರ್ಕಾರದ 50% ರಿಯಾಯಿತಿ ಯೋಜನೆಯಡಿ ಮಂಗಳೂರು ನಗರದಲ್ಲಿ ಬಾಕಿ ಇದ್ದ ಒಟ್ಟು 35,160 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 92.43 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.







ಜೂನ್ 21 ರಿಂದ ಜುಲೈ 10 ರವರೆಗೆ ದೀರ್ಘಕಾಲದ ಬಾಕಿ ಪ್ರಕರಣಗಳ ಇತ್ಯರ್ಥಕ್ಕಾಗಿ ಮಂಗಳೂರು ಪೊಲೀಸ್ ಆಯುಕ್ತಾಲಯವು ವಿಶೇಷ ಅಭಿಯಾನ ನಡೆಸಿತ್ತು.ಇತ್ಯರ್ಥಗೊಂಡ ಒಟ್ಟು ಪ್ರಕರಣಗಳಲ್ಲಿ 18,792 ಎಐ (AI) ಕ್ಯಾಮೆರಾಗಳ ಮೂಲಕ ಪತ್ತೆಯಾಗಿದ್ದರೆ, 16,368 ಪ್ರಕರಣಗಳನ್ನು ಪೊಲೀಸರು ನೇರವಾಗಿ ದಾಖಲಿಸಿದ್ದರು. ಸವಾರರು ಆನ್‌ಲೈನ್ ಮತ್ತು ಪೊಲೀಸ್ ಠಾಣೆಗಳ ಮೂಲಕ ದಂಡ ಪಾವತಿಸಿದ್ದಾರೆ.






ರಸ್ತೆ ಸುರಕ್ಷತೆ ಕಟ್ಟುನಿಟ್ಟಿನ ಜಾರಿಗಾಗಿ, ಗಂಭೀರ ಅಪಘಾತ ಹಾಗೂ ನಿಯಮ ಉಲ್ಲಂಘಿಸಿದ 224 ಚಾಲಕರ ಲೈಸೆನ್ಸ್ (DL) ಅಮಾನತಿಗೆ ಆರ್‌ಟಿಒಗೆ ಶಿಫಾರಸು ಮಾಡಲಾಗಿದೆ. ಈ ಪೈಕಿ ಈಗಾಗಲೇ 137 ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.

error: Content is protected !!
Scroll to Top