ಮಂಗಳೂರು: ಕೆಪಿಟಿ ಬಳಿ ಭೀಕರ ರಸ್ತೆ ಅಪಘಾತ; ರಜೆಯಲ್ಲಿದ್ದ ಕೊಯಿಲಾದ CISF ಯೋಧ ನಿಧನ

(ನ್ಯೂಸ್‌ ಕಡಬ) newskadaba.com,  ಜು.09:  ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪದ ರೆಡಿಯಂಟ್ ಸ್ಟಾರ್ ಹೋಟೆಲ್ ಬಳಿ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯೋಧರೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಕೊಯಿಲಾ ನಿವಾಸಿ ಸೀತಾರಾಮ ಗೌಡ ಎಂದು ಗುರುತಿಸಲಾಗಿದೆ. ಜಮ್ಮುವಿನ ಸೆಂಟ್ರಲ್ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಜುಲೈ 3ರಂದು ರಜೆಯ ಮೇಲೆ ಊರಿಗೆ ಬಂದಿದ್ದರು. ಜುಲೈ 8ರಂದು ಮಧ್ಯಾಹ್ನ ಕೊಯಿಲಾದಿಂದ ತಮ್ಮ ಬೈಕ್ (KA-21-K-7558) ನಲ್ಲಿ ಹೊರಟಿದ್ದಾಗ ಸಂಜೆ 3:40ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆಯೇ ಅಥವಾ ಬೇರೆ ವಾಹನ ಡಿಕ್ಕಿ ಹೊಡೆದಿದೆಯೇ ಎಂಬ ಕುರಿತು ಮೃತರ ಪತ್ನಿ ರೋಹಿಣಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Scroll to Top