ಮಗುವಿನ ಅಳುವಿಗೆ ಸಿಟ್ಟುಗೊಂಡು ನೆಲಕ್ಕೆ ಎಸೆದ ತಂದೆ ಬೆಂಗಳೂರಿನಲ್ಲಿ ದಂಪತಿ ಅರೆಸ್ಟ್

crime, arrest, suspected


(ನ್ಯೂಸ್ ಕಡಬ) newskadaba.com ಜು. 07. ಹನ್ನೊಂದು ತಿಂಗಳ ಹೆಣ್ಣುಮಗುವೊಂದನ್ನು ಕೊಲೆಮಾಡಿ, ಆ ಸಾವನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮಗುವಿನ ಹೆತ್ತವರನ್ನು ​ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಅವಲಹಳ್ಳಿಯ ಕಿಟಗನೂರಿನಲ್ಲಿ ನಡೆದಿದೆ.







 

ಬಂಧಿತ ಆರೋಪಿಗಳನ್ನು ತಂದೆ ಶೇಕಪ್ಪ ಮತ್ತು ತಾಯಿ ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. ಘಟನೆಯ ಪ್ರಕಾರ, ಜೂನ್ 9ರಂದು ದಂಪತಿ ನಡುವಿನ ಜಗಳದ ನಡೆದಿದ್ದು, ಈ ವೇಳೆ ಮಗು ಅಳುತ್ತಿದ್ದಕ್ಕೆ ಸಿಟ್ಟಿಗೆದ್ದ ತಂದೆ ಶೇಕಪ್ಪ ಮಗುವನ್ನು ನೆಲಕ್ಕೆ ಬಲವಾಗಿ ಎಸೆದಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಅದಾಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.






 

ಘಟನೆಯನ್ನು ಮುಚ್ಚಿಡಲು ಮೊದಲಿಗೆ ತಂದೆ, ಮಗು ಹಾಸಿಗೆಯಿಂದ ಬಿದ್ದು ಮೃತಪಟ್ಟಿದೆ ಎಂದು ಪೊಲೀಸರಿಗೆ ಹೇಳಿದ್ದರಿಂದ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ​ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗು ರಕ್ತಸ್ರಾವ ಮತ್ತು ಆಂತರಿಕ ಗಾಯಗಳಿಂದ ಉಂಟಾದ ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದ ತನಿಖೆ ಮುಂದುವರಿಸಿದ ಪೊಲೀಸರು, ಸಾಕ್ಷಿದಾರರನ್ನು ವಿಚಾರಣೆ ಮಾಡಿದ್ದಾರೆ.

ಹೀಗಾಗಿ, ವೈದ್ಯಕೀಯ ವರದಿ ಮತ್ತು ಸಾಕ್ಷಿಗಳ ಆಧಾರದ ಮೇಲೆ, ಆರೋಪಿಗಳ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಮತ್ತು 3(5)ರ ಅಡಿ ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top