ತೆಂಗು ಬೆಳೆಗಾರರಿಗೆ ಶಾಕ್: ₹25 ಕ್ಕೆ ಕುಸಿದ ತೆಂಗಿನಕಾಯಿ ಬೆಲೆ; ಎಳನೀರು, ಕೊಬ್ಬರಿ ದರ ಮಾತ್ರ ಗಗನಕ್ಕೆ!



(ನ್ಯೂಸ್‌ ಕಡಬ) newskadaba.com,  ಜು.07 :ಕಳೆದ ಎರಡು ವರ್ಷಗಳಿಂದ ಏರುತ್ತಿದ್ದ ತೆಂಗಿನಕಾಯಿ ಬೆಲೆ ಈಗ ಇಳಿಕೆಯಾಗಿದ್ದು, ಪ್ರತಿ ಕಾಯಿಗೆ ₹50–₹60 ಇದ್ದ ದರ ಪ್ರಸ್ತುತ ₹25 ರಿಂದ ₹30 ಕ್ಕೆ ತಲುಪಿದೆ. ಗೌರಿ-ಗಣೇಶ ಹಬ್ಬದವರೆಗೆ ಇದೇ ಬೆಲೆ ಮುಂದುವರಿಯುವ ಸಾಧ್ಯತೆಯಿದೆ.







ರಾಜ್ಯದಲ್ಲಿ ಉತ್ತಮ ತೆಂಗಿನ ಇಳುವರಿ, ತಮಿಳುನಾಡಿನಿಂದ ಬರುತ್ತಿರುವ ಅಪಾರ ಪ್ರಮಾಣದ ಆವಕ, ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ತೆಂಗಿನಕಾಯಿ ಪೌಡರ್ ಉತ್ಪಾದನಾ ಕೇಂದ್ರಗಳು ಖರೀದಿ ಮಿತಿಗೊಳಿಸಿರುವುದು.






ತೆಂಗಿನಕಾಯಿ ಬೆಲೆ ಇಳಿದಿದ್ದರೂ ಎಳನೀರು ಮತ್ತು ಕೊಬ್ಬರಿ ಬೆಲೆ ಮಾತ್ರ ಗಗನದಲ್ಲೇ ಉಳಿದಿದೆ. ಗುಣಮಟ್ಟದ ಎಳನೀರು ₹60–₹70 ಕ್ಕೆ ಮಾರಾಟವಾಗುತ್ತಿದ್ದರೆ, ತಿಪಟೂರು ಎಪಿಎಂಸಿಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ₹28 ರಿಂದ ₹32 ಸಾವಿರದಷ್ಟಿದೆ.

error: Content is protected !!
Scroll to Top