(ನ್ಯೂಸ್ ಕಡಬ) newskadaba.com, ಜು.04 : ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ (86) ಅವರ ಅಧಿಕೃತ ಅಂತ್ಯಕ್ರಿಯೆ ಸಮಾರಂಭಗಳು ಶನಿವಾರ ಟೆಹ್ರಾನ್‌ನಲ್ಲಿ ಪ್ರಾರಂಭವಾಗಿವೆ. ಕಳೆದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಖಮೇನಿ ಹತ್ಯೆಗೀಡಾಗಿದ್ದರು.
ಇಸ್ಲಾಮಿಕ್ ಗಣರಾಜ್ಯದ ಧ್ವಜ ಹಾಗೂ ಕಪ್ಪು ಪೇಟ ಧರಿಸಲಾಗಿದ್ದ ಖಮೇನಿ ಅವರ ಶವಪೆಟ್ಟಿಗೆಯ ಪಕ್ಕದಲ್ಲೇ, ದಾಳಿಗೆ ಬಲಿಯಾಗಿದ್ದ ಅವರ 14 ತಿಂಗಳ ಪುಟ್ಟ ಮೊಮ್ಮಗಳ ಶವಪೆಟ್ಟಿಗೆಯನ್ನೂ ಇರಿಸಲಾಗಿತ್ತು.ಇರಾನ್ ಮತ್ತು ಇರಾಕ್‌ನಾದ್ಯಂತ ಒಟ್ಟು ಆರು ದಿನಗಳ ಕಾಲ ಸಾರ್ವಜನಿಕ ದರ್ಶನ ಹಾಗೂ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿವೆ.
ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ಮೂರು ದಿನಗಳಲ್ಲಿ ಕೇವಲ ಟೆಹ್ರಾನ್‌ನಲ್ಲೇ ಸುಮಾರು 1.50 ರಿಂದ 2 ಕೋಟಿ ಜನಸಾಗರ ಹರಿದುಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.









