ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ನೇಜಿ ನಾಟಿ ಪ್ರಾತ್ಯಕ್ಷಿಕೆ



(ನ್ಯೂಸ್ ಕಡಬ) newskadaba.com ಕಡಬ, ಜು. 02. ಪಠ್ಯಪೂರಕ ಚಟುವಟಿಕೆಗಳ ಭಾಗವಾಗಿ ಇಕೋ ಕ್ಲಬ್ ವತಿಯಿಂದ ಸೈಂಟ್ ಜೋಕಿಮ್ಸ್ ಮತ್ತು ಸೈಂಟ್ ಆನ್ಸ್ ಪ್ರೌಢಶಾಲೆಯ ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಸುವರ್ಣ ನಿಲಯ ಕೋಡಿಬೈಲು ಶ್ರೀಮತಿ ದೇವಕಿ ಪೂಜಾರಿ ಇವರ ಮನೆಯ ಗದ್ದೆಯಲ್ಲಿ ಭತ್ತದ ಕೃಷಿ ಹಾಗೂ ನಾಟಿಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.







ನೇಜಿ ನಾಟಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾದರ್ ಪ್ರಕಾಶ್ ಪೌಲ್ ಡಿ ಸೋಜಾ ರವರು ವಿದ್ಯಾರ್ಥಿಗಳು ಭತ್ತದ ಬೇಸಾಯ ಕ್ರಮಗಳನ್ನು ತಿಳಿಯಲು ಇದೊಂದು ಸೂಕ್ತ ವೇದಿಕೆ ಮಾತ್ರವಲ್ಲದೇ ಗದ್ದೆಯ ಮಣ್ಣಿನಿಂದ ದೈಹಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಹಾಗೂ ಬೆಳವಣಿಗೆ ಯಾಗುವುದರ ಜೊತೆಗೆ ನೇಜಿ ನಾಟಿಯ ಬಗ್ಗೆ ಹೆಚ್ಚಿನ ಕಲಿಕೆಗೆ ಪೂರಕವಾದ ಅವಕಾಶ ಇದಾಗಿದೆ ಎಂದು ಹೇಳಿದರು.






ಈ ಸಂದರ್ಭದಲ್ಲಿ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ಡಾ ರೊಡ್ರಿಗಸ್ ಹಾಗೂ ಕೋಡಿಬೈಲು ಮನೆಯ ಶ್ರೀಮತಿ ದೇವಕಿ ಪೂಜಾರಿ ಮಕ್ಕಳಾದ ಸತೀಶ್, ಸಂತೋಷ್ ಹಾಗೂ ಸಂಸ್ಥೆಗಳ ಇಕೋ ಕ್ಲಬ್ ನ ನಿರ್ದೇಶಕರುಗಳಾದ ಪೂರ್ಣಿಮಾ ಪಿ, ಮಾನಸ, ದೀಕ್ಷಾ, ದೈಹಿಕ ಶಿಕ್ಷಣ ಶಿಕ್ಷಕರಾದ ಸಮದ್, ಸುಪ್ರಿಯಾ ಭಾಗವಹಿಸಿದ್ದರು.

ಕೆಸರುಗದ್ದೆ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ಜಾನ್ ವೇಗಸ್ ಹಾಗೂ ಶ್ರೀಮತಿ ದೇವಕಿ ಪೂಜಾರಿ ಇವರಿಗೆ ಸಂಸ್ಥೆ ವತಿಯಿಂದ ಸಂಚಾಲಕರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಬೆಳಿಗ್ಗೆ ಕೆಸರುಗದ್ದೆಗಿಳಿದ ಮಕ್ಕಳು, ಗದ್ದೆ ಕೆಲಸದ ನುರಿತ ಮಹಿಳೆಯರ ಮಾರ್ಗದರ್ಶನದಲ್ಲಿ ನೇಜಿ ತೆಗೆಯುವುದು, ನೇಜಿ ನಾಟಿ ಮಾಡುವ ಬಗ್ಗೆ ವಿವಿಧ ಹಂತದ ತರಬೇತಿಯನ್ನು ಪಡೆದರು. ಮನೋರಂಜನ ಚಟುವಟಿಕೆಗಳಾದ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಹ್ಯಾಂಡ್ ಬಾಲ್, ವಾಲಿಬಾಲ್. ಮುಂತಾದ ಆಟಗಳನ್ನು ವಿದ್ಯಾರ್ಥಿಗಳು ಸಂಭ್ರಮಿಸಿದರು.

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ರುಚಿಯಾದ ಊಟ ಸುವರ್ಣ ನಿಲಯ ಕೋಡಿಬೈಲು ಮನೆಯಲ್ಲಿ ನೀಡಿದರು. ವಿದ್ಯಾಸಂಸ್ಥೆಯಿಂದ ನೇಜಿ ನಾಟಿಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಚಿತ್ರಕಲಾ ಶಿಕ್ಷಕರಾದ ಸತೀಶ್ ಪಂಜ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!
Scroll to Top