(ನ್ಯೂಸ್ ಕಡಬ) newskadaba.com, ಜು.01:ನಿರ್ವಹಣಾ ವೆಚ್ಚಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿನ ನೈಸ್ ರಸ್ತೆ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಟೋಲ್ ದರಗಳನ್ನು ಇಂದಿನಿಂದ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ. ಪ್ರಯಾಣದ ದೂರ ಹಾಗೂ ವಾಹನಗಳ ಪ್ರಕಾರಕ್ಕೆ ಅನುಗುಣವಾಗಿ ದರ ಪರಿಷ್ಕರಣೆ ನಡೆದಿದೆ.
- ಹೊಸೂರು ರಸ್ತೆ – ಬನ್ನೇರುಘಟ್ಟ ರಸ್ತೆ:
- ಕಾರುಗಳು: ₹65 ರಿಂದ ₹72 ಕ್ಕೆ ಏರಿಕೆ.
- ದ್ವಿಚಕ್ರ ವಾಹನಗಳು: ₹30 ರಿಂದ ₹33 ಕ್ಕೆ ಏರಿಕೆ.
- ಬಸ್ಗಳು: ₹195 ರಿಂದ ₹215 ಕ್ಕೆ ಹೆಚ್ಚಳ.
- ಟ್ರಕ್ಗಳು: ₹128 ರಿಂದ ₹141 ಕ್ಕೆ ಏರಿಕೆ.
- ಟೋಲ್ ದರಗಳು ಹೆಚ್ಚಳವಾಗಿರುವುದರಿಂದ ಬಿಎಂಟಿಸಿ ಬಸ್ಗಳ ಕಾರ್ಯಾಚರಣೆ ವೆಚ್ಚ ಹೆಚ್ಚಲಿದ್ದು, ಈ ಹೆಚ್ಚುವರಿ ಹೊರೆಯನ್ನು ಪ್ರಯಾಣಿಕರ ಮೇಲೆ ಹೊರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ನಲ್ಲಿ ಏಕಮುಖ ಸಂಚಾರದ ದರದಲ್ಲಿ ಬದಲಾವಣೆಯಿಲ್ಲದಿದ್ದರೂ, ಬಹುಮುಖ ಸಂಚಾರದ ದರದಲ್ಲಿ ₹5 ಹೆಚ್ಚಳ ಮಾಡಲಾಗಿದೆ.









