ಹೈವೇಗಳಲ್ಲಿ ಸ್ಪೀಡ್ ರಾಡಾರ್ ಕ್ಯಾಮೆರಾ ಎಫೆಕ್ಟ್; ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾರಿ ಇಳಿಕೆ!



(ನ್ಯೂಸ್‌ ಕಡಬ) newskadaba.com, ಜೂ. 30: ಜಿಲ್ಲೆಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಪ್ರಮುಖ 6 ಸ್ಥಳಗಳಲ್ಲಿ ಸ್ಪೀಡ್ ರಾಡಾರ್ ಕ್ಯಾಮೆರಾಗಳನ್ನು ಅಳವಡಿಸಿದ ಬೆನ್ನಲ್ಲೇ, ಅತಿವೇಗ ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾರಿ ಇಳಿಕೆ ಕಂಡುಬಂದಿದೆ.ನಿಗದಿತ ವೇಗ ಮಿತಿ ಮೀರಿದ ಲಘು ವಾಹನಗಳಿಗೆ ₹1,000 ಹಾಗೂ ಭಾರಿ ವಾಹನಗಳಿಗೆ ₹2,000 ದಂಡ ವಿಧಿಸಲಾಗುತ್ತಿದೆ.







2024 ರಿಂದ ಮೇ 2026 ರವರೆಗೆ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 635 ಜನರು ಮೃತಪಟ್ಟಿದ್ದು, 3,257 ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.ಕ್ಯಾಮೆರಾಗಳು ಒಟ್ಟು 1.19 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದರೂ, ತಾಂತ್ರಿಕ ಪರಿಶೀಲನೆಯ ನಂತರ ದಿನಕ್ಕೆ ಕೇವಲ 10 ರಿಂದ 15 ಚಲನ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ.






ಕಳೆದ ಒಂದು ತಿಂಗಳಲ್ಲಿ 335 ಚಲನ್ ನೀಡಲಾಗಿದೆ.”ವಾಹನ ಚಾಲಕರು ಸ್ವಯಂಪ್ರೇರಣೆಯಿಂದ ನಿಯಮ ಪಾಲಿಸಲಿ ಎಂಬುದು ನಮ್ಮ ಉದ್ದೇಶ. ಸದ್ಯಕ್ಕೆ ಪ್ರತಿಯೊಂದು ಉಲ್ಲಂಘನೆಗೂ ನೋಟಿಸ್ ನೀಡುತ್ತಿಲ್ಲ. ಆದರೆ ನಿಯಮ ಉಲ್ಲಂಘನೆ ಮುಂದುವರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲೇ ಜಿಲ್ಲೆಯ ಇತರೆ ಪ್ರಮುಖ ಜಂಕ್ಷನ್‌ಗಳಿಗೂ ಕ್ಯಾಮೆರಾ ವಿಸ್ತರಿಸಲಾಗುವುದು,” ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

error: Content is protected !!
Scroll to Top