ಮಗನಿಗೆ ರೀ-ಎಂಟ್ರಿ ನಿರಾಕರಿಸಿದ ಶಾಲೆ: ಮನನೊಂದ ತಾಯಿಯಿಂದ ಶಾಲಾ ಶೌಚಾಲಯದಲ್ಲೇ ವಿಷಸೇವನೆ, ಸ್ಥಿತಿ ಗಂಭೀರ



(ನ್ಯೂಸ್‌ ಕಡಬ) newskadaba.com, ಜೂ. 30: 10ನೇ ತರಗತಿ ವಿದ್ಯಾರ್ಥಿಯ ಅಮಾನತು ಆದೇಶ ಹಿಂಪಡೆಯಲು ಹಾಗೂ ಮರುಪ್ರವೇಶ ನೀಡಲು ಶಾಲೆ ನಿರಾಕರಿಸಿದ್ದರಿಂದ ಮನನೊಂದ ತಾಯಿಯೊಬ್ಬರು ಶಾಲೆಯ ಶೌಚಾಲಯದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಸಂತ್ರಸ್ತ ತಾಯಿ ಸುಮಿತ್ರಾ ಅವರನ್ನು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.







ಕೆಲವು ದಿನಗಳ ಹಿಂದೆ 10ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಶಾಲೆಯ ಹೊರಗೆ ಗಲಾಟೆ ನಡೆದು, ಇಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಬಳಿಕ ಎರಡೂ ಕುಟುಂಬಗಳು ಮಾತುಕತೆ ನಡೆಸಿ ರಾಜಿ ಮಾಡಿಕೊಂಡಿದ್ದವು. 10ನೇ ತರಗತಿಯ ವಿದ್ಯಾರ್ಥಿಯ ತಾಯಿ ಸುಮಿತ್ರಾ ಅವರೇ ಇತರ ವೈದ್ಯಕೀಯ ವೆಚ್ಚವನ್ನೂ ಭರಿಸಿದ್ದರು.






ಆಸ್ಪತ್ರೆಯಿಂದ ಮಾಹಿತಿ ಪಡೆದ ಶಾಲಾ ಆಡಳಿತ ಮಂಡಳಿ, ಕೇವಲ 10ನೇ ತರಗತಿ ವಿದ್ಯಾರ್ಥಿಯನ್ನು ಮಾತ್ರ ಅಮಾನತುಗೊಳಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಎರಡು ವಾರಗಳಿಗೂ ಹೆಚ್ಚು ಕಾಲ ಮಗನಿಗೆ ಕ್ಲಾಸ್‌ಗೆ ಬರಲು ಬಿಡದ ಶಾಲೆ, ಆತನಿಗೆ ಯಾವುದೇ ‘ಕ್ರಿಮಿನಲ್ ಹಿನ್ನೆಲೆ ಇಲ್ಲ’ ಎಂಬ ಪೊಲೀಸ್ ಪ್ರಮಾಣಪತ್ರ ತರುವಂತೆ ಒತ್ತಾಯಿಸಿತ್ತು.

ವಿದ್ಯಾರ್ಥಿ ಅಪ್ರಾಪ್ತನಾಗಿದ್ದು, ಆತನ ಮೇಲೆ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ ಎಂದು ಭಾರತಿನಗರ ಪೊಲೀಸರು ಶಾಲೆಗೆ ಖುದ್ದಾಗಿ ಮನವಿ ಮಾಡಿದ್ದರೂ ಮರುಪ್ರವೇಶಕ್ಕೆ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಇದರಿಂದ ನೊಂದ ತಾಯಿ ಸುಮಿತ್ರಾ ಸೋಮವಾರ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ.

error: Content is protected !!
Scroll to Top