(ನ್ಯೂಸ್ ಕಡಬ) newskadaba.com,ಜೂ.20 :ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ಮೊಟ್ಟೆ ದರ ಸತತವಾಗಿ ಏರಿಕೆಯಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ ₹8.50ರ ಆಸುಪಾಸಿಗೆ ತಲುಪಿದೆ. ಸಗಟುಮಾರುಕಟ್ಟೆಯಲ್ಲಿ ಇದರ ಬೆಲೆ ₹7.50 ಇದೆ.
ತಮಿಳುನಾಡಿನ ನಾಮಕಲ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ತೀವ್ರ ಬಿಸಿಲಿನ ಕಾರಣದಿಂದಾಗಿ ಮೊಟ್ಟೆ ಉತ್ಪಾದನೆ ಕುಸಿದಿದೆ.
ಶಾಲೆಗಳು ಆರಂಭವಾಗಿರುವುದರಿಂದ ತಮಿಳುನಾಡಿನಲ್ಲಿ ದಿನಕ್ಕೆ 5 ಲಕ್ಷ ಮೊಟ್ಟೆಗಳು ಬಿಸಿಯೂಟಕ್ಕೆ ಬಳಕೆಯಾಗುತ್ತಿವೆ.ಇಂಧನ ದರ ಏರಿಕೆಯಿಂದ ಸಾಗಾಟ ವೆಚ್ಚ ಹಾಗೂ ಕೋಳಿ ಆಹಾರಗಳಾದ ಜೋಳ, ಸೋಯಾಬೀನ್ ಬೆಲೆ ಹೆಚ್ಚಾಗಿ ಪೌಲ್ಟ್ರಿ ಫಾರ್ಮ್‌ಗಳ ನಿರ್ವಹಣಾ ವೆಚ್ಚ ದುಬಾರಿಯಾಗಿದೆ.ಮಳೆಗಾಲದ ಆರಂಭದಲ್ಲಿ ಪ್ರೋಟೀನ್ ಆಹಾರಕ್ಕಾಗಿ ಮೊಟ್ಟೆಯ ಬೇಡಿಕೆ ಹೆಚ್ಚಾಗಿದೆ.









