ಸಿರಪ್‌ ಮುಕ್ತ ಮಾರಾಟಕ್ಕೆ ಬ್ರೇಕ್ ಇನ್ಮುಂದೆ ವೈದ್ಯರ ಚೀಟಿ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ



(ನ್ಯೂಸ್‌ ಕಡಬ) newskadaba.com  ಜೂ.19 ಕೇಂದ್ರ ಆರೋಗ್ಯ ಇಲಾಖೆಯು ಹಾಲಿ ಜಾರಿಯಲ್ಲಿದ್ದ ಔಷಧ ನಿಯಮಗಳಿಗೆ ಮಹತ್ವದ ತಿದ್ದುಪಡಿ ತಂದಿದ್ದು, ಸಿರಪ್‌ಗಳ ಮುಕ್ತ ಮಾರಾಟಕ್ಕೆ ನೀಡಲಾಗಿದ್ದ ವಿನಾಯಿತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇನ್ಮುಂದೆ ಗ್ರಾಹಕರು ವೈದ್ಯರ ಚೀಟಿ ತೋರಿಸಿದರಷ್ಟೇ ಫಾರ್ಮಸಿಗಳಲ್ಲಿ ಸಿರಪ್ ನೀಡಲು ಸೂಚಿಸಲಾಗಿದೆ.







ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಫ ಮತ್ತು ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸೇರಿದಂತೆ ಹಲವರು ಮೃತಪಟ್ಟಿದ್ದರು. ಲಾಭದ ಆಸೆಗೆ ಬಿದ್ದ ಕೆಲವು ತಯಾರಕರು ಸಿರಪ್‌ಗಳಲ್ಲಿ ಅಗ್ಗದ ಹಾಗೂ ವಿಷಕಾರಿ ರಾಸಾಯನಿಕಗಳನ್ನು ಬಳಸಿದ್ದು ಈ ದುರಂತಕ್ಕೆ ಕಾರಣವಾಗಿತ್ತು.






ಕಲುಷಿತ ಸಿರಪ್‌ಗಳ ಸೇವನೆಯಿಂದಾಗಿ ರೋಗಿಗಳ ಯಕೃತ್ ಮತ್ತು ಮೂತ್ರಪಿಂಡಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಅಂಗಾಂಗ ವೈಫಲ್ಯದಿಂದ ಸಾವುಗಳು ಸಂಭವಿಸಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು.

ಈ ಸರಣಿ ಸಾವುಗಳ ಬೆನ್ನಲ್ಲೇ ಸಂಬಂಧಪಟ್ಟ ಸಿರಪ್‌ಗಳನ್ನು ನಿಷೇಧಿಸಿ, ನಿಯಮ ಉಲ್ಲಂಘಿಸಿದ ತಯಾರಿಕಾ ಕಂಪನಿಗಳ ವಿರುದ್ಧ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ, ಸಾರ್ವಜನಿಕರು ಮನಬಂದಂತೆ ಸ್ವಯಂ ಔಷಧೋಪಚಾರ ಮಾಡಿಕೊಳ್ಳುವುದನ್ನು ತಡೆಯಲು ಸರ್ಕಾರ ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ.

error: Content is protected !!
Scroll to Top