(ನ್ಯೂಸ್ ಕಡಬ) newskadaba.com ಜೂ.19: ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮದ ವತಿಯಿಂದ 2026-27 ನೇ ಸಾಲಿನ ‘ಅರಿವು’ ಶೈಕ್ಷಣಿಕ ಸಾಲ ಯೋಜನೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸಿ.ಇ.ಟಿ ಅಥವಾ ನೀಟ್ ಪರೀಕ್ಷೆ ಬರೆದು ವೃತ್ತಿಪರ ಕೋರ್ಸ್ಗಳಾದ MBBS, BDS, ಆಯುಷ್, ಬಿ.ಇ/ಬಿ.ಟೆಕ್, ಬಿ.ಆರ್ಕ್, ಫಾರ್ಮಸಿ, ಅಗ್ರಿಕಲ್ಚರ್ ಮತ್ತು ವೆಟರ್ನರಿ ಸೈನ್ಸ್ಗೆ ಆಯ್ಕೆಯಾಗುವ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು.
- ಅರ್ಜಿ ಸಲ್ಲಿಸುವ ವೆಬ್ಸೈಟ್: karnataka.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
- ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ರೂ. ಗಳ ಮಿತಿಯೊಳಗಿರಬೇಕು.
ಅಗತ್ಯ ದಾಖಲಾತಿಗಳು:
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಜೆರಾಕ್ಸ್ ಪ್ರತಿ
- CET / NEET ಪರೀಕ್ಷೆಯ ಪ್ರವೇಶ ಪತ್ರ
- ದೃಢೀಕೃತ SSLC ಮತ್ತು PUC ಅಂಕಪಟ್ಟಿಗಳು
- ಇಂಡೆಮ್ನಿಟಿ ಬಾಂಡ್
- ವಿದ್ಯಾರ್ಥಿ ಮತ್ತು ಪೋಷಕರ ತಲಾ 2 ಭಾವಚಿತ್ರಗಳು









