ಮೆಟಾದಿಂದ ಹೊಸ ಕ್ರಾಂತಿ: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್‌ಗೆ ‘ಪ್ಲಸ್’ ಸಬ್‌ಸ್ಕ್ರಿಪ್ಷನ್ ಲಾಂಚ್!



(ನ್ಯೂಸ್ಕಡಬ) newskadaba.com,  ಜೂ.18 :ಸಾಮಾಜಿಕ ಜಾಲತಾಣಗಳ ದೈತ್ಯ ಸಂಸ್ಥೆ ಮೆಟಾ, ತನ್ನ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದ್ದು, ತನ್ನ ಜನಪ್ರಿಯ ವೇದಿಕೆಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ಗಾಗಿ ಹೊಸ ‘ಪ್ಲಸ್’ ಸಬ್‌ಸ್ಕ್ರಿಪ್ಷನ್ ಯೋಜನೆಗಳನ್ನು ಜಾಗತಿಕವಾಗಿ ಪರಿಚಯಿಸಿದೆ. ಈ ಕುರಿತು ಸಂಸ್ಥೆಯ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥೆ ನವೋಮಿ ಗ್ಲೈಡ್ ಅಧಿಕೃತವಾಗಿ ಘೋಷಿಸಿದ್ದಾರೆ.







ಜಾಹೀರಾತು ರಹಿತ ಹಾಗೂ ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿರುವ ಈ ‘ಫೇಸ್‌ಬುಕ್ ಪ್ಲಸ್’, ‘ಇನ್‌ಸ್ಟಾಗ್ರಾಮ್ ಪ್ಲಸ್’ ಮತ್ತು ‘ವಾಟ್ಸಾಪ್ ಪ್ಲಸ್’ ಯೋಜನೆಗಳು ಬಳಕೆದಾರರಿಗೆ ಕಸ್ಟಮೈಸ್ಡ್ ಪ್ರೊಫೈಲ್, ಸುಧಾರಿತ ಅನಾಲಿಟಿಕ್ಸ್ ಹಾಗೂ ವಿಶೇಷ ಪರಿಕರಗಳನ್ನು ಒದಗಿಸಲಿವೆ. ಸದ್ಯದ ಉಚಿತ ಆವೃತ್ತಿಗಳು ಎಂದಿನಂತೆ ಮುಂದುವರಿಯಲಿದ್ದು, ಹೆಚ್ಚುವರಿ ಸೌಲಭ್ಯ ಬಯಸುವವರಿಗೆ ಮಾತ್ರ ಈ ಪ್ಲಸ್ ಯೋಜನೆಗಳು ಲಭ್ಯವಿರಲಿವೆ ಎಂದು ಮೆಟಾ ಸ್ಪಷ್ಟಪಡಿಸಿದೆ.






error: Content is protected !!
Scroll to Top