ಭಾರತದಲ್ಲಿ ಟೆಲಿಗ್ರಾಮ್ ಬ್ಯಾನ್?!”



(ನ್ಯೂಸ್‌ ಕಡಬ) newskadaba.com,  ಜೂ.17: ಕೇಂದ್ರ ಸರ್ಕಾರ ವಿಧಿಸಿರುವ ತಾತ್ಕಾಲಿಕ ನಿಷೇಧವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ; ಇಂದು ತುರ್ತು ವಿಚಾರಣೆ ಸಾಧ್ಯತೆ.







ಜೂನ್ 21ರ ನೀಟ್-ಯುಜಿ ಮರುಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡಲು ಹಾಗೂ ಈ ಹಿಂದೆ ನಡೆದಿದ್ದ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಕೇಂದ್ರ ಈ ಕ್ರಮ ಕೈಗೊಂಡಿದೆ ಐಟಿ ಕಾಯ್ದೆ ಸೆಕ್ಷನ್ 69A ಅಡಿಯಲ್ಲಿ ಜೂನ್ 22ರವರೆಗೆ ಟೆಲಿಗ್ರಾಮ್ ಸೇವೆ ಹಾಗೂ ಜೂನ್ 30ರವರೆಗೆ ಮೆಸೇಜ್ ಎಡಿಟಿಂಗ್ ಸೌಲಭ್ಯವನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.






 ‘Paper Leaked NEET’, ‘Re-NEET 2026’ ನಂತಹ ನಕಲಿ ಚಾನೆಲ್‌ಗಳಿಂದ ವಿದ್ಯಾರ್ಥಿಗಳಿಗೆ ಆಗುವ ವಂಚನೆ ತಡೆಯಲು ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ.

error: Content is protected !!
Scroll to Top