(ನ್ಯೂಸ್ ಕಡಬ) newskadaba.com, ಜೂ.16 : ಕೇಂದ್ರ ಸರ್ಕಾರವು ಡೀಸೆಲ್ ಮತ್ತು ವಿಮಾನ ಇಂಧನ ರಫ್ತು ಮೇಲಿನ ಸುಂಕವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.ಪ್ರತಿ ಲೀಟರ್ಗೆ 50 ಪೈಸೆ ಹೆಚ್ಚಳ ಮಾಡಲಾಗಿದ್ದು, ಹಳೆಯ ದರ 12.5 ರೂ.ನಿಂದ 14 ರೂ. ಗೆ ಏರಿಕೆಯಾಗಿದೆ.ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಲಾಗಿದ್ದು, ಹಳೆಯ ದರ 9.5 ರೂ.ನಿಂದ 12.5 ರೂ. ಗೆ ಏರಿಕೆಯಾಗಿದೆ.
ಯಾವುದೇ ಬದಲಾವಣೆ ಇಲ್ಲದೆ ಪ್ರತಿ ಲೀಟರ್ಗೆ 1.5 ರೂ. ನಲ್ಲೇ ಮುಂದುವರಿದಿದೆ.ಈ ತೆರಿಗೆ ಬದಲಾವಣೆಯು ಕೇವಲ ವಿದೇಶಿ ರಫ್ತುಗಳಿಗೆ ಮಾತ್ರ ಅನ್ವಯಿಸುವುದರಿಂದ, ದೇಶೀಯ ಮಾರುಕಟ್ಟೆಯ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ದರಗಳು ಯಥಾಸ್ಥಿತಿಯಲ್ಲಿ ಇರಲಿವೆ.
ತೈಲ ಕಂಪನಿಗಳು ದೇಶೀಯ ಮಾರುಕಟ್ಟೆಯನ್ನು ಕಡೆಗಣಿಸಿ, ವಿದೇಶಗಳಿಗೆ ರಫ್ತು ಮಾಡಿ ಅತಿಯಾದ ಲಾಭ ಗಳಿಸುವುದನ್ನು ತಡೆಯುವುದು ಹಾಗೂ ದೇಶದ ಒಳಗಡೆ ಇಂಧನ ಕೊರತೆಯಾಗದಂತೆ ನೋಡಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಜಾಗತಿಕ ಮಾರುಕಟ್ಟೆ ದರಗಳ ಆಧಾರದ ಮೇಲೆ ಸರ್ಕಾರ ಪ್ರತಿ 15 ದಿನಗಳಿಗೊಮ್ಮೆ ಈ ತೆರಿಗೆಯನ್ನು ಪರಾಮರ್ಶಿಸುತ್ತದೆ.









