(ನ್ಯೂಸ್ ಕಡಬ) newskadaba.com, ಜೂ.16 ಕಡಬ: ಇಲ್ಲಿನ ಪ್ರಸಿದ್ಧ ವೈದ್ಯ ಡಾ. ಸಿ.ಕೆ. ಶಾಸ್ತ್ರಿ ಅವರ ಮೊಮ್ಮಗ, ಮಂಗಳೂರಿನ ಬೆಂದೂರುವೆಲ್ ನಿವಾಸಿ ಸುರತ್ಕಲ್ ಎನ್ ಐ.ಟಿ.ಕೆ. ಯಲ್ಲಿನ ಪ್ರಾಧ್ಯಾಪಕರಾಗಿರುವ ಬಡೆಕೈ ಡಾ. ರಾಮಚಂದ್ರ ಭಟ್ ಹಾಗೂ ಮಂಗಳೂರಿನ ಪ್ರಸಿದ್ಧ ಸ್ತ್ರಿ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ಪೂರ್ಣಿಮಾ ಭಟ್ ಇವರ ಪುತ್ರ ಬಿ. ವಿಶ್ರುತ್ ಕೃಷ್ಣ ಅವರು ಜೆಇಇ ಅಡ್ವಾನ್ಸ್ 2026ರಲ್ಲಿ ಆಲ್ ಇಂಡಿಯಾ 79ನೇ ರ್ಯಾಂಕ್ ಮತ್ತು ಜೆಇಇ ಮೇನ್ಸ್ 2026ರಲ್ಲಿ ಆಲ್ ಇಂಡಿಯಾ 335ನೇ Rank ಗಳಿಸಿದ್ದಾರೆ.
ಇವರು ದ.ಕ. ಹಾಗೂ ಉಡುಪಿ ಬಿ.ವಿಶ್ರುತ ಕೃಷ್ಣ ಅವರು ಜಿಲ್ಲೆಗೆ ಟಾಪರ್ ಅಲ್ಲದೆ ಕರ್ನಾಟಕ ದ ಅಗ್ರ 10 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಶೈಕ್ಷಣಿಕ ಕವಾಗಿ ಅದ್ಬುತವಾಗಿ ಸಾಧನೆಗೈದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಇವರನ್ನು ಈಗಾಗಲೇ ಆರೋಗ್ಯ ಸಚಿವ ಯು.ಟಿ. ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಅವರು ಸನ್ಮಾನಿಸಿ ಗೌರವಿಸಿದ್ದಾರೆ.









