ಮೆಡಿಕಲ್ ಶಾಪ್‌ಗಳಲ್ಲಿ ಸಿರಪ್ ಖರೀದಿಗೆ ಹೊಸ ರೂಲ್ಸ್: ‘ಷೆಡ್ಯೂಲ್ ಕೆ’ ನಿಂದ ‘ಸಿರಪ್’ ಪದ ತೆಗೆದುಹಾಕಿದ ಕೇಂದ್ರ ಆರೋಗ್ಯ ಇಲಾಖೆ



(ನ್ಯೂಸ್‌ ಕಡಬ) newskadaba.com,  ಜೂ.16 : ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲಾ ರೀತಿಯ ಸಿರಪ್ ಆಧಾರಿತ ಔಷಧಿಗಳ ಮುಕ್ತ ಮಾರಾಟವನ್ನು ಕೇಂದ್ರ ಆರೋಗ್ಯ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ.ಇನ್ನುಮುಂದೆ ಯಾವುದೇ ಸಿರಪ್ ಖರೀದಿಸಬೇಕಾದರೂ ವೈದ್ಯರ ಅಧಿಕೃತ ಚೀಟಿ ಕಡ್ಡಾಯವಾಗಿ ಬೇಕೇ ಬೇಕು.







1945ರ ಔಷಧ ನಿಯಮಗಳ ‘ಷೆಡ್ಯೂಲ್ ಕೆ’ ಅಡಿಯಲ್ಲಿ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಯಿಂದ ‘ಸಿರಪ್‌ಗಳು’ ಎಂಬ ಪದವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ.ದೇಶದ ಎಲ್ಲಾ ಫಾರ್ಮಸಿಗಳು ಮತ್ತು ಸಾರ್ವಜನಿಕರಿಗೆ ಈ ನಿಯಮ ತಕ್ಷಣದಿಂದಲೇ ಅನ್ವಯವಾಗಲಿದೆ.






error: Content is protected !!
Scroll to Top