(ನ್ಯೂಸ್ ಕಡಬ) newskadaba.com, ಜೂ.16 ::ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್ ವಿತರಿಸಲು ಅಂತಿಮ ರೂಪುರೇಶೆ ಸಿದ್ಧವಾಗುತ್ತಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.ಸ್ಮಾರ್ಟ್ ಕಾರ್ಡ್ಗಳ ಸಮರ್ಪಕ ವಿತರಣೆಗಾಗಿ ‘ವಿಶೇಷ ಉದ್ದೇಶಿತ ವಾಹನ’ ಅನ್ನು ರಚಿಸಿ, ಅದರ ಮೂಲಕವೇ ವಿತರಣಾ ಪ್ರಕ್ರಿಯೆ ನಡೆಸಲಾಗುತ್ತದೆ.
ಕಾರ್ಡ್ನ ಸ್ವರೂಪ, ತಾಂತ್ರಿಕ ನೆರವು ಮತ್ತು ಟೆಂಡರ್ ಪ್ರಕ್ರಿಯೆಯ ಮಾರ್ಗದರ್ಶನಕ್ಕಾಗಿ ‘ವಹಿವಾಟು ಸಲಹೆಗಾರರ ಸಮಿತಿ’ಯನ್ನು ನೇಮಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕಾರ್ಡ್ಗಳನ್ನು ವಿತರಿಸಲಾಗುವುದು.
ತಾಂತ್ರಿಕ ನಿರ್ವಹಣೆಯನ್ನು ಖಾಸಗಿ ಸಂಸ್ಥೆ ವಹಿಸಿಕೊಳ್ಳಲಿದೆ.ಸ್ಮಾರ್ಟ್ ಕಾರ್ಡ್ ಸಂಪೂರ್ಣ ಉಚಿತವಾಗಿದ್ದು, ಇದರ ಸಂಸ್ಕರಣಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಪುರುಷ ಪ್ರಯಾಣಿಕರು ಹಣ ಪಾವತಿಸಿ ಈ ಕಾರ್ಡ್ಗಳನ್ನು ಖರೀದಿಸಬೇಕಾಗುತ್ತದೆ.ಒಟ್ಟಾರೆಯಾಗಿ ಸುಮಾರು 2.5 ರಿಂದ 3 ಕೋಟಿ ಕಾರ್ಡ್ಗಳ ವಿತರಣೆಯ ಅಂದಾಜಿದೆ.
ಪರಿಸರ ಸಂರಕ್ಷಣೆಯ ಅಂಗವಾಗಿ ಸಾರಿಗೆ ಇಲಾಖೆಯ 4 ನಿಗಮಗಳಿಗೆ ಹಂತಹಂತವಾಗಿ 4,000ಕ್ಕೂ ಅಧಿಕ ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿದೆ.









