ಸಂಕಷ್ಟದಲ್ಲಿರುವ ಪ್ರತಿಷ್ಠಿತ ಎಚ್‌ಎಂಟಿ ಸಂಸ್ಥೆಗೆ ಹೊಸ ಕಳೆ: ಸಚಿವ ಕುಮಾರಸ್ವಾಮಿ ಮಹತ್ವದ ಪ್ರಕಟಣೆ



(ನ್ಯೂಸ್ಕಡಬ) newskadaba.com,  ಜೂ.13 ಬೆಂಗಳೂರು: ಸಂಕಷ್ಟದಲ್ಲಿರುವ ಭಾರತದ ಪ್ರತಿಷ್ಠಿತ ಸಾರ್ವಜನಿಕ ವಲಯದ ಉದ್ಯಮ ‘ಹಿಂದೂಸ್ತಾನ್‌ ಮಷೀನ್‌ ಟೂಲ್ಸ್‌’ ಕಂಪನಿಗೆ ಮರುಜೀವ ನೀಡುವ ಮಾಸ್ಟರ್ ಪ್ಲಾನ್ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.







ಬೆಂಗಳೂರಿನ ಸಿಎಂಟಿಐ ಸಂಸ್ಥೆಯ 65ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಉತ್ಪಾದನೆ ಆಧಾರಿತ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಯ ದೂರದೃಷ್ಟಿಗೆ ಪೂರಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.






ನೀತಿ ಆಯೋಗದ ಸದಸ್ಯ ಡಾ. ವಿ. ಕೆ. ಸಾರಸ್ವತ್‌ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಎಚ್‌ಎಂಟಿ ಘಟಕಗಳನ್ನು ಶೀಘ್ರದಲ್ಲೇ ಪುನರುಜ್ಜೀವನಗೊಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

error: Content is protected !!
Scroll to Top