(ನ್ಯೂಸ್ ಕಡಬ) newskadaba.com,ಜೂ.12 ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಯತ್ನ.
ಮೇಕೆದಾಟು ಜಲಾಶಯ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್‌ವಿ) ಕಾರ್ಯಕರ್ತರು.ಉಡುಪಿ ಜಿಲ್ಲೆಯ ಉದ್ಯಾವರದ ಬಳಿ ಜಮಾಯಿಸಿದ್ದ 20ಕ್ಕೂ ಹೆಚ್ಚು ಕೆಆರ್‌ವಿ ಕಾರ್ಯಕರ್ತರನ್ನು ಸ್ಥಳಕ್ಕೆ ಬರುವ ಮುನ್ನವೇ ತಡೆದು, ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದ ಪೊಲೀಸರು.
ಉಡುಪಿ ಜಿಲ್ಲಾದ್ಯಂತ ಹಾಗೂ ಸಿಎಂ ಸಂಚರಿಸುವ ಮಾರ್ಗದಲ್ಲಿ ಬಿಗಿ ಪೊಲೀಸ್ ಭದ್ರತೆ ಮತ್ತು ತೀವ್ರ ನಿಗಾ. ಶಾಂತಿ ಕಾಪಾಡಲು ಕಾರ್ಯಕರ್ತರನ್ನು ಸಮೀಪದ ಠಾಣೆಗೆ ರವಾನೆ.









