‘ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಮೋದಿ ಆಡಳಿತವೇ ಪರಿಹಾರ’: ಬಿ.ಯಾವಿ.ವಿಜಯೇಂದ್ರ



(ನ್ಯೂಸ್‌ ಕಡಬ) newskadaba.com,  ಜೂ.11:ಬೆಂಗಳೂರು: ಹಿಂದಿನ ಯುಪಿಎ ಸರ್ಕಾರದ ಭ್ರಷ್ಟಾಚಾರ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತದಿಂದ ಬೇಸತ್ತಿದ್ದ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಸೂಕ್ತ ಪರಿಹಾರ ನೀಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಯಾವಿ.ವಿಜಯೇಂದ್ರ ಹೇಳಿದ್ದಾರೆ.







ಯುಪಿಎ ಅವಧಿಯ ₹12 ಲಕ್ಷ ಕೋಟಿಗೂ ಅಧಿಕ ಮೊತ್ತದ ಹಗರಣಗಳಿಗೆ ಹೋಲಿಸಿದರೆ, ಮೋದಿ ಅವರ ಆಡಳಿತಾವಧಿಯಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ.ಜಾಗತಿಕ ಸವಾಲುಗಳ ಮಧ್ಯೆಯೂ ಭಾರತ ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ.






ರಕ್ಷಣಾ ಬಜೆಟ್ ಹಂಚಿಕೆಯಲ್ಲಿ ಶೇ. 165 ರಷ್ಟು ಹೆಚ್ಚಳವಾಗಿದ್ದು, ದೇಶವು ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ‘ಆತ್ಮನಿರ್ಭರತೆ’ ಸಾಧಿಸುತ್ತಿದೆ. ಬಡವರು, ರೈತರು, ಮಹಿಳೆಯರು ಮತ್ತು ಯುವಕರನ್ನು ಕೇಂದ್ರೀಕರಿಸಿ ಜಾರಿಗೊಳಿಸಲಾದ ಯೋಜನೆಗಳಿಂದಾಗಿ ದೇಶದ 140 ಕೋಟಿ ನಾಗರಿಕರು ಮೋದಿ ನಾಯಕತ್ವದ ಮೇಲೆ ದೃಢ ವಿಶ್ವಾಸ ಹೊಂದಿದ್ದಾರೆ.

 

error: Content is protected !!
Scroll to Top