(ನ್ಯೂಸ್ ಕಡಬ) newskadaba.com, ಜೂ.11 ಬಂಟ್ವಾಳ: ಪಾಣೆಮಂಗಳೂರು ಮೆಸ್ಕಾಂ ಶಾಖೆಯ ಸಹಾಯಕ ಮೆಕಾನಿಕ್, ಮಿತ್ತೂರು ನಿವಾಸಿ ಚಂದ್ರಶೇಖರ ನಾಯ್ಕ (55) ಬುಧವಾರ ಕರ್ತವ್ಯದ ಅವಧಿಯಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಂಭೂರು ಸಮೀಪದ ಕುಂದಾಯಗೋಳಿಯಲ್ಲಿ ವಿದ್ಯುತ್ ಕಂಬ ದುರಸ್ತಿ ಮುಗಿಸಿ, ಮತ್ತೊಂದು ಇಲಾಖಾ ಕೆಲಸಕ್ಕೆ ಸಹೋದ್ಯೋಗಿ ಜೊತೆ ಬೈಕಿನಲ್ಲಿ ತೆರಳುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದಾರೆ. ತಕ್ಷಣ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.









