ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೋ ಪಾಸ್‌ಗೆ ಬಿಎಂಸಿಎ ಒತ್ತಾಯ



(ನ್ಯೂಸ್‌ ಕಡಬ) newskadaba.com, ಜೂ.11  : ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದ ಬೆನ್ನಲ್ಲೇ, ಬಿಎಂಆರ್‌ಸಿಎಲ್ ಕೂಡ ನಮ್ಮ ಮೆಟ್ರೋದಲ್ಲಿ ಉಚಿತ ಪಾಸ್ ನೀಡಬೇಕೆಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ ಆಗ್ರಹಿಸಿದೆ.







ಸಾರಿಗೆ ವೆಚ್ಚ ಶಿಕ್ಷಣಕ್ಕೆ ತಡೆಯಾಗಬಾರದು. ಉಚಿತ ಪ್ರಯಾಣದಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ತಪ್ಪಲಿದ್ದು, ಸುರಕ್ಷಿತವಾಗಿ ಶಾಲೆ-ಕಾಲೇಜು ತಲುಪಬಹುದು.






ಇದು ಸುಸ್ಥಿರ ಸಾರ್ವಜನಿಕ ಸಾರಿಗೆ ಸಂಸ್ಕೃತಿಯನ್ನು ಬೆಳೆಸಿ, ಖಾಸಗಿ ವಾಹನಗಳ ಅವಲಂಬನೆ ಕಡಿಮೆ ಮಾಡುತ್ತದೆ. ಅಲ್ಲದೆ, ಸಾರ್ವಜನಿಕ ಸಾರಿಗೆ ಬಳಕೆಯಿಂದ ಜನರ ಆರೋಗ್ಯ ಸುಧಾರಿಸುತ್ತದೆ ಎಂದು IISc ಅಧ್ಯಯನ ಉಲ್ಲೇಖಿಸಿ ಸಂಘ ತಿಳಿಸಿದೆ.

error: Content is protected !!
Scroll to Top