(ನ್ಯೂಸ್ ಕಡಬ) newskadaba.com ಜೂ. 08. ಮಂಗಳೂರಿನ ಬೆಂಗ್ರೆ, ಸುಲ್ತಾನ್ ಬತ್ತೇರಿ ಹಾಗೂ ಬೊಕ್ಕಪಟ್ಣ ಭಾಗದ ಫಲ್ಗುಣಿ ನದಿಯಲ್ಲಿ ಶನಿವಾರದಂದು ನೂರಾರು ಮೀನುಗಳು ಸತ್ತುಬಿದ್ದಿದ್ದು, ರಾಸಾಯನಿಕ ಮಾಲಿನ್ಯದಿಂದಾಗಿ ಉಸಿರಾಡಲು ಸಾಧ್ಯವಾಗದೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಸೇತುವೆ ಕಾಮಗಾರಿಗೆ ಹಾಕಲಾಗಿದ್ದ ತಡೆಗೋಡೆಯಿಂದಾಗಿ ಕಳೆದ 5 ತಿಂಗಳುಗಳಿಂದ ನದಿಯಲ್ಲಿ ಕೈಗಾರಿಕಾ ರಾಸಾಯನಿಕ ತ್ಯಾಜ್ಯ ಹಾಗೂ ಒಳಚರಂಡಿ ನೀರು ಒಂದೇ ಕಡೆ ಸಂಗ್ರಹವಾಗಿತ್ತು. ಅಲ್ಲದೇ ಇದೀಗ ಮಳೆಯಿಂದಾಗಿ ನದಿಯಲ್ಲಿ ಹೊಸ ನೀರು ಬಂದಾಗ ಮೇಲ್ಮುಖವಾಗಿ ಈಜಿದ ಮೀನುಗಳು, ನೀರಿನಲ್ಲಿದ್ದ ತೀವ್ರ ರಾಸಾಯನಿಕ ಮಾಲಿನ್ಯದಿಂದಾಗಿ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದೆ ಎನ್ನಲಾಗಿದೆ.
ಸಂಸ್ಕರಿಸದ ಒಳಚರಂಡಿ ತ್ಯಾಜ್ಯವನ್ನು ನದಿಗೆ ಬಿಡಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಈಗಾಗಲೇ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.









