ಸುಳ್ಯ : 3 ಕಾರುಗಳ ನಡುವೆ ಸರಣಿ ಅಪಘಾತ – ಕಾರುಗಳು ಜಖಂ



(ನ್ಯೂಸ್ಕಡಬ) newskadaba.com,  ಮೇ.18: ದೇವರಕೊಲ್ಲಿ ಬಳಿ 3 ಕಾರುಗಳ ನಡುವೆ ಸರಣಿ ಅಪಘಾತ ಉಂಟಾಗಿ ಕಾರುಗಳು ಜಖಂಗೊಂಡಿರುವ ಘಟನೆ ಸಂಭವಿಸಿದೆ.







ಸುಳ್ಯ ಕಡೆಯಿಂದ ಮಡಿಕೇರಿಯತ್ತ ಹೋಗುತ್ತಿದ್ದ ಕಾರಿಗೆ ಮಡಿಕೇರಿಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಚಾಲಕ ಬ್ರೇಕ್ ಹಾಕಿದಾಗ ಅದರ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಈ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮೂರೂ ಕಾರುಗಳು ಜಖಂಗೊಂಡಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.






error: Content is protected !!
Scroll to Top