(ನ್ಯೂಸ್ ಕಡಬ) newskadaba.com,ಮೇ.16: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಭಾರತ ಸಮರ್ಥ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬಹುದು. ಭಾರತಕ್ಕೆ ಅಂತಹ ವಿಶಾಲ ರಾಜತಾಂತ್ರಿಕ ಸಾಮರ್ಥ್ಯ ಇದೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ತಿಳಿಸಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, “ತುರ್ತು ಸಮಸ್ಯೆಗಳನ್ನು ಪರಿಹರಿಸಲು ಅಮೆರಿಕ ಮತ್ತು ಇರಾನ್ ನಡುವೆ ಸಂವಾದಗಳನ್ನು ಸ್ಥಾಪಿಸಲು ಪಾಕಿಸ್ತಾನ ಸಹಾಯ ಮಾಡುತ್ತಿದೆ. ಇರಾನ್ ಮತ್ತು ಅದರ ಅರಬ್ ಸ್ನೇಹಿತರ ನಡುವೆ ದೀರ್ಘಾವಧಿಯ ಮಧ್ಯವರ್ತಿಯನ್ನು ಅವರು ಹುಡುಕಿದರೆ, ಭಾರತವು ತನ್ನ ಅಪಾರ ರಾಜತಾಂತ್ರಿಕ ಅನುಭವವನ್ನು ಪರಿಗಣಿಸಿ ಈ ಪಾತ್ರವನ್ನು ವಹಿಸಬಹುದು” ಎಂದಿದ್ದಾರೆ.
ಇನ್ನು ‘ಹಾರ್ಮುಜ್ ಬಿಕ್ಕಟ್ಟು ಪರಿಹಾರಕ್ಕೆ ಭಾರತ ಪರಿಹಾರ ಒದಗಿಸಬಹುದು’ ಎಂದು ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಅವರು ವಿದೇಶಾಂಗ ಸಚಿವ ಜೈಶಂಕರ್ ಜೊತೆಗಿನ ಮಾತುಕತೆ ವೇಳೆ ಹೇಳಿದ್ದಾರೆ.







