ಮಂಗಳೂರು: ನಕಲಿ ಪಾಸ್ ಪೋರ್ಟ್ ಸೃಷ್ಟಿ- ವಂಚನಾ ಜಾಲವನ್ನು ಭೇದಿಸಿದ ಪೊಲೀಸರು



(ನ್ಯೂಸ್ಕಡಬ) newskadaba.com,  ಮೇ.15: ಬೇರೊಬ್ಬರ ಗುರುತಿನ ದಾಖಲೆ ಪತ್ರಗಳನ್ನು ದುರುಪಯೋಗಪಡಿಸಿ ನಕಲಿ ಪಾಸ್‌ ಫೋರ್ಟ್‌ ರಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.ಉಳ್ಳಾಲ ನಿವಾಸಿ ಪ್ರೀತಾ ಡ.ಸೋಜಾ, ಪ್ರೇಮ್‌ ಡಿ.ಸೋಜಾ ಹಾಗೂ ಯಶೋಧ ಕೇಶವ ಸೇರಿದಂತೆ ಹಲವರ ವಿರುದ್ಧ ಗಂಭೀರ ಆರೋಪಗಳಡಿ ಕ್ರಿಮಿನಲ್‌ ಪ್ರಕೆಣ ದಾಖಲಿಸಿದ ಸಿಎಸ್‌ಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.







ಉಳ್ಳಾಲ ನಿವಾಸಿ ಯಶೋಧ ಕೇಶವ ಎಂಬ ಮಹಿಳೆಯ ಹೆಸರಿನಲ್ಲಿ ಅನ್ಯ ಮಹಿಳೆಯೊಬ್ಬರು ಪಾಸ್‌ಪೋರ್ಟ್‌ ಪಡೆದು ವಿದೇಶಕ್ಕೆ ಪ್ರಯಾಣಿಸಿರುವ ಬಗ್ಗೆ ಪೋಲೀಸರಿಗೆ ಗೌಪ್ಯ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಸಿ. ಎಸ್‌ ಬಿ ಪೊಲೀಸರು ತನಿಖೆ ಆರಂಭಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರ ಪರಿಶೀಲನೆಯ ವೇಳೆ ಪಾಸ್‌ಫೋರ್ಟ್‌ ನಲ್ಲಿ ಹೆಸರು ಹಾಗೂ ವಿಳಾಸ ಯಶೋಧ ಕೇಶವ ಅವರದ್ದಾಗಿದ್ದರೂ, ಅದರಲ್ಲಿ ಬಳಸಲಾಗಿದ್ದ ಭಾವಚಿತ್ರ ಮಾತ್ರ ಪ್ರೀತಾ ಡಿ. ಸೋಜಾ ಎಂಬಾಕೆಯದ್ದು ಎಂಬುವುದು ತಿಳಿದು ಬಂದಿದೆ.






ಪ್ರೀತಾ ಡಿಸೋಜಾ ಅವರನ್ನು ಅಕ್ರಮವಾಗಿ ಇಸ್ರೇಲ್‌ಗೆ ಕಳುಹಿಸುವ ಉದ್ದೇಶದಿಂದ ಈ ಸಂಪೂರ್ಣ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಈ ಕೃತ್ಯದ ಪ್ರಮುಖ ಸೂತ್ರಧಾರ ಉಳ್ಳಾಲ ನಿವಾಸಿಯಾಗಿದ್ದು, ಈತನ ನಕಲಿ ದಾಖಲೆಗಳನ್ನು ಸಿದ್ದಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಯಶೋಧರವರ ಶೈಕ್ಷಣಿಕ ದಾಖಲೆ, ವಿಳಾಸದ ಪುರಾವೆ ಹಾಗೂ ಇತರ ಅಧಿಕೃತ ದಾಖಲೆಗಳನ್ನು ಬಳಸಿಕೊಂಡು, ಪ್ರೀತಾ ಡಿ ಸೋಜಾ ಹೆಸರಲ್ಲಿ ಪಾಸ್‌ಪೋರ್ಟ್‌ ಮಾಡಿಸಿ ಅಧಿಕಾರಿಗಳನ್ನು ದಾರಿ ತಪ್ಪಿಸಲಾಗಿದೆ.

ಅಕ್ರಮ ಪಾಸ್ ಪೋರ್ಟ್ ನ್ನು ಬಳಸಿ ಪ್ರೀತಾ ಡಿಸೋಜಾ ಅವರು ಮಾರ್ಚ್‌೧೭ ೨೦೨ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ವಿದೇಶಕ್ಕೆ ತೆರಳಿರುವುದು ಕಂಡುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಸ್‌ಬಿ ಪೊಲೀಸ್‌ ರಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!
Scroll to Top