ವಿದ್ಯಾರ್ಥಿನಿಯ ಬ್ಯಾಗ್‌ನಲ್ಲಿತ್ತು 35 ಲಕ್ಷ ರೂ. ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೋವಿಡ ಗಾಂಜಾ!



(ನ್ಯೂಸ್‌ ಕಡಬ) newskadaba.com ಮೇ. 14. ಪಣಂಬೂರು ಎಸಿಪಿ ತಂಡ ಹಾಗೂ ಮೂಲ್ಕಿ ಠಾಣೆಯ ತಂಡದಿಂದ ನಡೆದ ಕಾರ್ಯಾಚರಣೆಯಲ್ಲಿ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ  ಹೈಡ್ರೊವಿಡ ಗಾಂಜಾ ಮಾದಕ ದ್ರವ್ಯ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ.







ಬಂಧಿತ ಆರೋಪಿಯನ್ನು ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ಸುಹಾನಾ (21) ಎಂದು ಗುರುತಿಸಲಾಗಿದೆ. ಬಂಧನದ ವೇಳೆ ಅವರ ಬಳಿ ಇದ್ದ ಸುಮಾರು 35 ಸಾವಿರ ರೂ. ಮೌಲ್ಯದ ಸುಮಾರು 1 ಕೆಜಿ 42 ಗ್ರಾಮ್ ಹೈಡ್ರೊವಿಡ ಗಾಂಜಾ ಎಂಬ ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಮತ್ತು ಇತರ ಸೊತ್ತು ವಶಪಡಿಸಿಕೊಳ್ಳಲಾಯಿತು.






ಮಾದಕ ವಸ್ತುವನ್ನು ಆರೋಪಿತೆಯು ಚೆನ್ನೈ ನಿಂದ ತರಿಸಿಕೊಂಡು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶದಿಂದ ತಂದಿರುವುದಾಗಿ ತಿಳಿದು ಬಂದಿರುತ್ತದೆ.

error: Content is protected !!
Scroll to Top